ಗಂಟೆಗೂ ಹೆಚ್ಚು ಕಾಲ ಸರದಿ ಸಾಲಲ್ಲಿ ನಿಂತು ಹಾಸನಾಂಬೆ ದರ್ಶನ ಪಡೆದ ಎಚ್.ಡಿ.ರೇವಣ್ಣ

Revanna-01

ಹಾಸನ,ಅ.21- ಸಾವಿರಾರು ಭಕ್ತರು ಇಂದು ಮುಂಜಾನೆಯಿಂದಲೇ ಇಲ್ಲಿನ ಹಾಸನಾಂಬೆ ದೇವಾಲಯಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದರು. ಮಾಜಿ ಸಚಿವ, ಶಾಸಕ ಎಚ್.ಡಿ.ರೇವಣ್ಣ ಧರ್ಮದರ್ಶನ ಸಾಲಿನಲ್ಲಿ ನಿಂತು ಸಾರ್ವಜನಿಕರೊಂದಿಗೆ ಹಾಸನಾಂಬೆಗೆ ವಿಶೇಷ ಪೂಜೆ ಸಲ್ಲಿಸಿ ನಮಿಸಿದರೆ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು 300 ರೂ.ಗಳ ಟಿಕೆಟ್ ಪಡೆದು ಮತ್ತೊಂದು ಸಾಲಿನಲ್ಲಿ ದೇವಿ ದರ್ಶನಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು.  ರೇವಣ್ಣ ಅವರು ದೇಗುಲಕ್ಕೆ ಆಗಮಿಸಿದಾಗ ಯಾವುದೇ ಶಿಷ್ಟಾಚಾರ ಬೇಡ, ನಾನು ಸಾಮಾನ್ಯನಂತೆ ದರ್ಶನ ಪಡೆಯುತ್ತೇನೆ ಎಂದು ಹೇಳಿದರು. ಆದರೆ ಗರ್ಭಗುಡಿ ಬಳಿ ಬರುತ್ತಿದ್ದಂತೆ ಉಪವಿಭಾಗಾಧಿಕಾರಿ ಅವರ ಮನವೊಲಿಸಿ ದೇವರ ಮುಂದೆ ಕರೆದೊಯ್ದು ದೇವಿ ಪೂಜೆಗೆ ಅನುವು ಮಾಡಿಕೊಟ್ಟರು. ನಂತರ ದೇವಾಲಯದ ಹೊರಗಡೆ ಬಂದು ಡಿಸಿ ಚೈತ್ರಾ ಅವರ ವರ್ತನೆ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ರಾಜ್ಯದ ಹಲವಾರು ಮೂಲೆಗಳಿಂದ ಸಾವಿರಾರು ಭಕ್ತರು ಇಲ್ಲಿಗೆ ಬರುತ್ತಿರುವುದರಿಂದ ಪೊಲೀಸರು ವಿಶೇಷ ಭದ್ರತೆಯನ್ನು ಮಾಡಿದ್ದಾರೆ. ಜಿಲ್ಲಾಡಳಿತದ ವತಿಯಿಂದ ಬರುವ ಭಕ್ತಾಧಿಗಳಿಗೆ ಕುಡಿಯುವ ನೀರು, ಆಹಾರದ ವ್ಯವಸ್ಥೆ ಸೇರಿದಂತೆ ಇತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ.

► Follow us on –  Facebook / Twitter  / Google+

Sri Raghav

Admin