ಗಂಡು ಮಗುವಿನ ತಾಯಿಯಾದ ಕರೀನಾ, ಮಗು ಹೆಸರೇನು ಗೊತ್ತೇ..?
ಮುಂಬೈ.ಡಿ.20 : ಬಾಲಿವುಡ್ ನಟ ಸೈಫ್ ಅಲಿ ಖಾನ್ ಪತ್ನಿ ನಟಿ ಕರೀನಾ ಕಪೂರ್ ಖಾನ್ ಇಂದು ಬೆಳಗ್ಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಬೆಳಗ್ಗೆ 7.30 ರ ಸುಮಾರಿಗೆ ಮುದ್ದಾದ ಗಂಡು ಮಗುವಿಗೆ ಕರೀನಾ ಜನ್ಮ ನೀಡಿದ್ದು, ಮಗು ಮತ್ತು ತಾಯಿ ಆರೋಗ್ಯವಾಗಿದ್ದಾರೆ. ಗಂಡು ಮಗುವಿಗೆ ‘ಟೈಮುರ್ ಅಲಿ ಖಾನ್ ಪಟೌಡಿ’ ಎಂದು ನಾಮಕಾರಣ ಮಾಡಲಾಗಿದೆ ಎಂಬ ಸಂಗತಿಯನ್ನ ಪತ್ರಿಕಾ ಪ್ರಕಟನೆಯಲ್ಲಿ ಪಟೌಡಿ ಕುಟುಂಬ ತಿಳಿಸಿದೆ.
My Bebo had a baby boy!!!!!!! Am so so happy!!!!!!! #TaimurAliKhan ❤️❤️❤️❤️❤️
— Karan Johar (@karanjohar) December 20, 2016
ಡಿಸೆಂಬರ್ 20, 2016 ರಂದು ನಮಗೆ ಗಂಡು ಮಗು ಜನಿಸಿದೆ ಎಂದು ಸೈಫ್ -ಕರೀನಾ ದಂಪತಿಗಳ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕರೀನಾ ಅಮ್ಮನಾದ ವಿಷಯವನ್ನು ಕರೀನಾ ಕಪೂರ್ ಅವರ ಅಕ್ಕ ಕರಿಶ್ಮಾ ಕಪೂರ್ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಬಾಲಿವುಡ್ ಸಿನಿಮಾ ನಿರ್ದೇಶಕ ಕರಣ್ ಜೋಹರ್ ಕೂಡಾ ಟ್ವಿಟರ್ ನಲ್ಲಿ ಈ ಸುದ್ದಿಯನ್ನು ಶೇರ್ ಮಾಡಿ ಸೈಫ್ ಕರೀನಾ ದಂಪತಿಗಳಿಗೆ ಶುಭಾಶಯ ಕೋರಿದ್ದಾರೆ.