ಗಡಿಯಲ್ಲಿ ಉಗ್ರರ ಅತಿಕ್ರಮಣ ಪ್ರವೇಶವನ್ನು ವಿಫಲಗೊಳಿಸಿದ ಬಿಎಸ್‍ಎಫ್ ಯೋಧರು

Spread the love

 

borderಜಮ್ಮು, ಅ.20- ಕಾಶ್ಮೀರದ ಕತುವಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ ಬಳಿ ನಡೆದ ಭೀಕರ ಗುಂಡಿನ ಕಾಳಗದ ನಂತರ ಆರು ಉಗ್ರರ ಅತಿಕ್ರಮಣ ಯತ್ನವನ್ನು ಬಿಎಸ್‍ಎಫ್ ಯೋಧರು ವಿಫಲಗೊಳಿಸಿದ್ದಾರೆ. ಈ ಎನ್‍ಕೌಂಟರ್‍ನಲ್ಲಿ ಉಗ್ರರ ಕಡೆ ಸಾವು-ನೋವಾಗಿರುವ ಸಾಧ್ಯತೆ ಇದೆ.  ಆರು ಜನರಿದ್ದ ಉಗ್ರಗಾಮಿಗಳ ಗುಂಪೆÇಂದು ಇಂದು ಮುಂಜಾನೆ 1.45ರ ಸಮಯದಲ್ಲಿ ಕತುವಾ ಜಿಲ್ಲೆಯ ಬೊಬಿಯಾದ ಮುಂಚೂಣಿ ಪ್ರದೇಶದೊಳಗೆ ನುಸುಳಲು ಯತ್ನಿಸಿ ಯೋಧರಿದ್ದ ವಾಹನದ ಮೇಲೆ ಭಾರೀ ಗುಂಡಿನ ದಾಳಿ ನಡೆಸಿತು. ಗಡಿ ಪ್ರದೇಶದ ಪಹರೆಯಲ್ಲಿದ್ದ ಈ ಯೋಧರು ತಕ್ಷಣ ಪ್ರತಿ ದಾಳಿ ನಡೆಸಿದರು. ರಾಕೆಟ್ ಚಾಲಿತ ಗ್ರೆನೇಡ್‍ಗಳೊಂದಿಗೆ ಬಿಎಸ್‍ಎಫ್ ದಿಟ್ಟ ಪ್ರತ್ಯುತ್ತರ ನೀಡಿದರು. ಸುಮಾರು 20 ನಿಮಿಷಗಳ ಕಾಲ ಭೀಕರ ಗುಂಡಿನ ಕಾಳಗ ನಡೆಯಿತು.

ಕಗ್ಗತ್ತಲಲ್ಲಿ ಗುಂಡಿನ ಚಕಮಕಿ ನಡೆಯತ್ತಿದ್ದ ವೇಳೆ ಬಿಎಸ್‍ಎಫ್ ಬೆಳಕು ಚೆಲ್ಲುವಂತೆ ಮಾಡಲು ಪ್ಯಾರಾ ಬಾಂಬ್‍ಗಳನ್ನು ಸಿಡಿಸಿದರು. ಆ ಬೆಳಕಿನಲ್ಲಿ ಉಗ್ರರು ತೀವ್ರ ಗಾಯಗೊಂಡ ಒಬ್ಬನನ್ನು ಹೊತ್ತುಕೊಂಡು ಕತ್ತಲಲ್ಲಿ ಕಣ್ಮರೆಯಾದರು. ಉಗ್ರರ ಕಡೆ ಸಾವು-ನೋವಾಗಿರುವ ಸಾಧ್ಯತೆ ಇದ್ದು, ಈ ಪ್ರದೇಶದಲ್ಲಿ ತೀವ್ರ ಶೋಧ ನಡೆಯುತ್ತಿದೆ ಎಂದು ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ.  ಉಗ್ರರು ಅಂತಾರಾಷ್ಟ್ರೀಯ ಗಡಿಯ ಮೂಲಕ ಒಳನುಸುಳಲು ಪಾಕಿಸ್ತಾನದ ಗಡಿ ಔಟ್‍ಪೋಸ್ಟ್ ಗಳ(ಬಿಪಿಒ) ಮೂಲಕ ಪಾಕ್ ಸೈನಿಕರು ಸಹ ಗುಂಡು ಹಾರಿಸಿರುವ ಸಾಧ್ಯತೆ ಇದೆ ಎಂದು ಅಧಿಕಾರಿ ತಿಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin