ಗಡಿಯಲ್ಲಿ ಪಾಕಿಗಳಿಂದ ಅಪ್ರಚೋದಿತ ಫೈರಿಂಗ್ : 10 ದಿನಗಳಲ್ಲಿ 23 ಬಾರಿ ಕದನವಿರಾಮ ಉಲ್ಲಂಘನೆ

Firing-01

ಶ್ರೀನಗರ, ಅ.7-ಭಾರತೀಯ ಕಮ್ಯಾಂಡೋಗಳ ಸರ್ಜಿಕಲ್ ದಾಳಿಯ ನಂತರ ಕಾಶ್ಮೀರ ಕಣಿವೆಯಲ್ಲಿ ಯೋಧರನ್ನು ಗುರಿಯಾಗಿಟ್ಟುಕೊಂಡು ಅಪ್ರಚೋದಿತ ಫೈರಿಂಗ್ ನಡೆಸುವುದನ್ನೇ ಕಾಯಕ ಮಾಡಿಕೊಂಡಿರುವ ಪಾಕಿಸ್ತಾನವು ಕಳೆದ 10 ದಿನಗಳಲ್ಲಿ 23 ಬಾರಿ ಯುದ್ಧವಿರಾಮ ಉಲ್ಲಂಘಿಸಿದೆ.  ಜಮ್ಮು ಮತ್ತು ಕಾಶ್ಮೀರದ ಪೂಂಚ್ ಗಡಿ ಬಳಿ ಇಂದು ಮುಂಜÁನೆ ಮತ್ತೆ ಕ್ಯಾತೆ ತೆಗೆದ ಪಾಕಿಸ್ತಾನಿ ಯೋಧರು ಭಾರತೀಯ ಸೇನಾ ನೆಲೆಗಳ ಮೇಲೆ ಪ್ರಚೋದನೆ ಇಲ್ಲದೇ ಗುಂಡಿನ ಮಳೆಗರೆದರು. ಪಾಕ್ ಕುಕೃತ್ಯಕ್ಕೆ ನಮ್ಮ ಸೈನಿಕರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ಹೇಳಿದ್ದಾರೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಏಳು ಉಗ್ರರ ನೆಲೆಗಳ ಮೇಲೆ ಭಾರತೀಯ ಯೋಧರು ಸರ್ಜಿಕಲ್ ಸ್ಟ್ರೈಕ್ ನಡೆಸಿದ ನಂತರ ಕಾಶ್ಮೀರದಲ್ಲಿ ಒಂದೆಡೆ ಯೋಧರಿಂದ ಅಪ್ರಚೋದಿತ ದಾಳಿ, ಇನ್ನೊಂದೆಡೆ ಉಗ್ರಗಾಮಿಗಳಿಂದ ವಿಧ್ವಂಸಕ ಕೃತ್ಯ ಯತ್ನಗಳು ಮುಂದುವರಿದಿದ್ದು, ಭಾರತೀಯ ಯೋಧರು ಸೂಕ್ತ ತಿರುಗೇಟು ನೀಡುತ್ತಿದ್ದಾರೆ.

► Follow us on –  Facebook / Twitter  / Google+

Sri Raghav

Admin