ಗಣಿಗಾರಿಕೆ ಪ್ರದೇಶಗಳಲ್ಲಿ ಮೂಲಸೌಕರ್ಯಾಭಿವೃದ್ಧಿ ಕಲ್ಪಿಸುವಂತೆ ಕರ್ನಾಟಕಕ್ಕೆ ಸುಪ್ರೀಂ ಆದೇಶ

Mining-Karnataka-Supreme-Co

ನವದೆಹಲಿ, ಮಾ.21-ಕರ್ನಾಟಕ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳ ಅಧಿಕೃತ ಗಣಿಗಾರಿಕೆ ಪ್ರದೇಶಗಳಲ್ಲಿ ವೈದ್ಯಕೀಯ ಸೌಲಭ್ಯಗಳೂ ಸೇರಿದಂತೆ ಅಗತ್ಯ ಮೂಲ ಸೌಕರ್ಯಾಭಿವೃದ್ದಿಗಳನ್ನು ಕಲ್ಪಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ.
ಸಾಮಾಜಿಕ ಪರಿವರ್ತನಾ ಸಮುದಾಯ ಸಲ್ಲಿಸಿದ್ದ ಅರ್ಜಿ ಕುರಿತು ವಿಚಾರಣೆ ನಡೆಸಿದ ಬಳಿಕ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ನೇತೃತ್ವದ ಪೀಠ ಕರ್ನಾಟಕ ಸರ್ಕಾರಕ್ಕೆ ಕೆಲವೊಂದು ಆದೇಶ ಮತ್ತು ಸೂಚನೆಗಳನ್ನು ನೀಡಿತು.

ಈ ಮೂರು ಜಿಲ್ಲೆಗಳಲ್ಲಿ ಅನುಮತಿ ನೀಡಲಾದ ಗಣಿಗಾರಿಕೆ ಪ್ರದೇಶಗಳಲ್ಲಿ ಕಾರ್ಮಿಕರು ಮತ್ತು ನಾಗರಿಕರ ಅನುಕೂಲಕ್ಕಾಗಿ ವೈದ್ಯಕೀಯ ಮತ್ತು ರೈಲ್ವೆ ಮೂಲಸೌಕರ್ಯಗಳನ್ನು ಅಭಿವೃದ್ದಿಗೊಳಿ¸ಬೇಕು ಎಂದು ತಿಳಿಸಿರುವ ಪೀಠವು ಅಲ್ಲಿ ಎರಡು ಮೆಡಿಕಲ್ ಕಾಲೇಜು ಸ್ಥಾಪನೆಗಾಗಿ ಪ್ರಸ್ತಾವನೆ ಸಲ್ಲಿಸುವಂತೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸಬಲೀಕರಣ ಆಯೋಗಕ್ಕೆ (ಸಿಇಸಿ) ಸೂಚನೆ ನೀಡಿತು.   ಅರಣ್ಯ ಅಭಿವೃದ್ದಿ ಶುಲ್ಕವನ್ನು ರಾಜ್ಯ ಸರ್ಕಾರ ಬಳಸುವಂತಿಲ್ಲ. ಅದನ್ನು ಅರಣ್ಯ ಅಭಿವೃದ್ದಿಗೆ ಮಾತ್ರ ನಿಗದಿಗೊಳಿಸಬೇಕು. ಅದಿರು ಮಾರಾಟದ ಆದಾಯದಲ್ಲಿ ಶೇಕಡ 10 ರಷ್ಟು ಮೊತ್ತವನ್ನು ವಿಶೇಷ ಉದ್ದೇಶಿತ ನಿಧಿಯಲ್ಲಿ (ಎಸ್‍ಪಿಇ) ಇಡಬೇಕು. ಜಿಲ್ಲಾ ಖನಿಜ ನಿಧಿಯಲ್ಲಿ ಇದನ್ನು ಠೇವಣಿ ಮಾಡಬೇಕು ಎಂದು ನ್ಯಾಯಾಲಯ ತಿಳಿಸಿದೆ.

ಈ ಮೂರು ಜಿಲ್ಲೆಗಳ ಗುತ್ತಿಗೆ ಗಣಿಗಾರಿಕೆ ಪ್ರದೇಶಗಳಲ್ಲಿ ಸಮೀಕ್ಷೆ ಮತ್ತು ಸರಹದ್ದು ನಿಗದಿ ಬಗ್ಗೆ ಸರ್ವೆ ನಡೆಸಿದ್ದ ಗಣಿ ಮತ್ತು ಭೂಗರ್ಭ ಸರ್ವೇಕ್ಷಣಾ ಇಲಾಖೆಯು ನ್ಯಾಯಾಲಯಕ್ಕೆ ತನ್ನ ವರದಿಯನ್ನು ನೀಡಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin