ಗಣೀಶ ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯ
ಕೊಳ್ಳೇಗಾಲ, ಆ.31-ಕೊಳ್ಳೇಗಾಲ ಪಟ್ಟಣ ಹಾಗೂ ತಾಲ್ಲೂಕಿನಲ್ಲಿ ಗೌರಿ ಗಣೀಶನ ಪ್ರತಿಷ್ಠಾಪನೆ ಮಾಡುವವರು ಕಡ್ಡಾಯವಾಗಿ ಪೊಲೀಸ್ ಠಾಣೆಯಿಂದ ಅನುಮತಿ ಪಡೆಯಬೇಕು ಹಾಗೂ ಹಬ್ಬವನ್ನು ಬಹಳ ಹೆಚ್ಚರಿಕೆಯಿಂದ ಆಚರಿಸಬೇಕು ಎಂದು ಡಿವೈಎಸ್ಪಿ ಸ್ನೇಹ ಸೂಚಿಸಿದ್ದಾರೆ.ಗೌರಿ ಗಣೇಶ ಹಾಗೂ ಬಕ್ರಿದ್ ಹಬ್ಬದ ಪ್ರಯುಕ್ತ ಪಟ್ಟಣ ಠಾಣೆಯಲ್ಲಿ ಏರ್ಪಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಗೌರಿ ಗಣೇಶ ಪ್ರತಿ ಷ್ಠಾಪನೆ ಮಾಡುವ ಸಂಘಗಳ ಉಸ್ತುವಾರಿ ವಹಿಸುವವರು ಕಾರ್ಯಕ್ರಮದ ಆಯೋಜನೆಗೆ ಸಂಬಂಧಿಸಿದಂತೆ ಎಲ್ಲ ಆಗುಹೋಗುಗಳಿಗೆ ಮುಖ್ಯಸ್ಥರೆ ಜವಾಬ್ಧಾರಿ ಎಂಬ ಬಗ್ಗೆ ತಮ್ಮ ಹೆಸರು, ವಿಳಾಸ ,ಮೊಬೈಲ್ ನಂಬರ್ ಹಾಗೂ ಮುಚ್ಚಳಿಕೆ ಬರೆದು ಕೊಡಬೇಕಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಏನಾದರು ನಿಮ್ಮಿಂದ ಬೇರೆಯವರಿಗೆ ತೊಂದರೆಯಾದರೆ ಅದಕ್ಕೆ ನೀವೇ ಹೋಣೆಯಾಗುವ ಸಂದರ್ಭವು ಇರುತ್ತದೆ ಎಂದು ಎಲ್ಲಾ ಕೋಮಿನ ಜನಾಂಗದವರಿಗೆ ಸೂಚಿಸಿದರು.ಮೆರವಣಿಗೆ ವಿಸರ್ಜನಾ ದಿನ ಮಾರ್ಗದ ವಿವರ ಸಲ್ಲಿಸಬೇಕು. ಪೊಲೀಸ್ ಠಾಣಾಧಿಕಾರಿಗಳೊಂದಿಗೆ ಖುದ್ದು ಚರ್ಚಿಸಿ ಕಡ್ಡಾಯವಾಗಿ ಅನುಮೋದನೆ ಪಡೆಯಬೇಕು ಎಂದು ಎಲ್ಲಾ ಜನಾಂಗದವರಿಗೆ ತಿಳಿಸಿದರು.ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವ ಸ್ಧಳ, ವಿಳಾಸ ಹಾಗೂ ಸ್ಧಳದ ಮಾಲೀಕರಿಂದ ಪಡೆದ ಅನುಮತಿ ಪತ್ರ ಗ್ರಾ.ಪಂ. ಪಟ್ಟಣ ಪಂಚಾಯ್ತಿ ಮತ್ತು ನಗರಸಭೆ ಖಾಸಗಿ ವ್ಯಕ್ತಿಗಳು ಸ್ಧಳೀಯ ವಿದ್ಯುತ್ ಪ್ರಾಧಿಕಾರದಿಂದ ಪಡೆದ ನಿರಾಪೇಕ್ಷಣ ಪತ್ರ ಸಲ್ಲಿಸಬೇಕು ಎಂದು ಸೂಚಿಸಿದರು. ಸಿಪಿಐ ಅಮರನಾರಾಯಣ್, ಪಿಎಸ್ಐ ಆನಂದ್, ಮುಖಂಡರುಗಳಾದ ಸಿದ್ದರಾಜು, ನಾಗರಾಜು, ಚಿಕ್ಕಲಿಂಗಯ್ಯ, ಬಾಲರಾಜು, ಕೃಷ್ಣಯ್ಯ, ನಟರಾಜುಮಾಳಿಗೆ, ಮನು, ಸೇರಿದಂತೆ ಎಲ್ಲಾ ಕೋಮಿನ ಜನಾಂಗದವರು ಭಾಗವಹಿಸಿದ್ದರು.