ಗಬ್ಬು ನಾರುತ್ತಿರುವ ಎಂಜಿನಿಯರ್ ಕಚೇರಿ ಶೌಚಾಲಯ
ಚನ್ನಪಟ್ಟಣ, ಸೆ.16- ಮೂಲಭೂತ ಸೌಕರ್ಯಗಳು ಹಾಗೂ ಹಲವಾರು ಅಭಿವೃದ್ಧಿ ಕೆಲಸಗಳ ಬಗ್ಗೆ ಸದಾ ಗಮನ ಹರಿಸುವ ಎಂಜಿನಿಯರ್ಗಳ ಕಚೇರಿ ಶೌಚಾಲಯ ಗಬ್ಬೆದ್ದು ನಾರುತ್ತಿದ್ದು, ಇತ್ತ ಯಾರು ಗಮನಿಸದಿರುವುದು ಶೋಚನೀಯವಾಗಿದೆ.ನಗರದ ಎಂ.ಜಿ.ರಸ್ತೆಯಲ್ಲಿರುವ ಜಿಲ್ಲಾ ಪಂಚಾಯ್ತಿಯ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ ಕಚೇರಿಯ ಒಳಾಂಗಣದಲ್ಲಿ ಸಿಬ್ಬಂದಿಗಾಗಿ ಲಕ್ಷಾಂತರ ರೂ. ವೆಚ್ಚ ಮಾಡಿ ಶೌಚಾಲಯ ನಿರ್ಮಿಸಿದ್ದು, ಇದೀಗ ಅದು ಪಾಳು ಬಿದ್ದ ಮನೆಯಂತಾಗಿದೆ. ಪಂಚಾಯತ್ರಾಜ್ ಇಂಜಿನಿಯರಿಂಗ್ ವಿಭಾಗ ಎಷ್ಟರಮಟ್ಟಿಗೆ ಕರ್ತವ್ಯ ನಿರ್ವಹಿಸುತ್ತಿದೆ ಎಂಬುದಕ್ಕೆ ಇದೊಂದು ಉದಾಹರಣೆ.
ಕಚೇರಿ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಕಚೇರಿಯಲ್ಲಿಯೇ ಇರುವ ಶೌಚಾಲಯವನ್ನು ಬಳಸಿದರೇ ಸಾರ್ವಜನಿಕರು ಈ ಗಬ್ಬು ಶೌಚಾಲಯವನ್ನೇ ಬಳಸುವಂತಾಗಿದೆ. ಹತ್ತಾರು ಎಂಜಿನಿಯರ್ಗಳನ್ನು ಹೊಂದಿರುವ ಹಾಗೂ ಸದಾ ಅಭಿವೃದ್ಧಿ ಕಾಮಗಾರಿಗಳ ವಿಚಾರ ಚರ್ಚೆಯಲ್ಲೆ ಮಗ್ನವಾಗಿ ಗುತ್ತಿಗೆದಾರರು ಸಾರ್ವಜನಿಕರಿಂದ ಗುಯ್ಗುಡುವ ಕಚೇರಿಯ ಬಳಿ ನಿರ್ಮಾಣವಾಗಿರುವ ಶೌಚಾಲಯದ ಸ್ವಚ್ಛತೆಯ ಬಗ್ಗೆ ಗಮನ ನೀಡದಿರುವುದರಿಂದ ಶೌಚಾಲಯದಿಂದ ಬರುವ ಗಬ್ಬುವಾಸನೆ ಕಚೇರಿಗೂ ಸೂಸುತ್ತಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸುವರೆ ಕಾದು ನೋಡಬೇಕಿದೆ.
► Follow us on – Facebook / Twitter / Google+