ಗಾಂಧೀಜಿ ಒಂದು ವ್ಯಕ್ತಿಯಲ್ಲ ಒಂದು ಶಕ್ತಿ

3

ನರೇಗಲ್ಲ,ಅ.3- ನಮಗೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದ ಮಹಾತ್ಮಾ ಗಾಂಧೀಜಿ ಒಂದು ಶಕ್ತಿಯಲ್ಲ ; ಅದೊಂದು ನಮ್ಮ ಭಾರತದ ದೊಡ್ಡ ಶಕ್ತಿ ಎಂದು ಶಿಕ್ಷಕ ಪಿ.ಎಚ್. ತಾಂಬೋಟಿ ಹೇಳಿದರು.ಸಮೀಪದ ಕೋಟುಮಚಗಿಯ ಶ್ರೀ ಸೋಮೇಶ್ವರ ಪ್ರೌಢಶಾಲೆಯಲ್ಲಿ ಇಂದು ರವಿವಾರ ಆಚರಿಸಲಾದ ಗಾಂಧೀಜಿ ಮತ್ತು ಶಾಸ್ತ್ರೀಜಿ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ಭಾರತವು ಏಕೆತಯಲ್ಲಿ ಅನೇಕತೆಯನ್ನು, ಅನೇಕತೆಯಲ್ಲಿ ಏಕತೆಯನ್ನು ಹೊಂದಿದ ರಾಷ್ಟ್ರವಾಗಿದೆ. ನಮ್ಮಲ್ಲಿ ಮೊದಲು ರಾಷ್ಟ್ರಪ್ರe್ಞÉ ಮತ್ತು ರಾಷ್ಟ್ರಾಭಿಮಾನ ಮೂಡಬೇಕು. ನಾವು ಮಾಡುವ ಪ್ರತಿ ಕಾರ್ಯವೂ ದೇಶದ ಕಾರ್ಯ ಎಂದು ಮಾಡಿದ್ದೇ ಆದರೆ ನಮ್ಮ ದೇಶದಲ್ಲಿ ಅಭಿವೃದ್ದಿಯ ದಿನಗಳು ದೂರವಿಲ್ಲ ಎನ್ನಿಸುತ್ತದೆ. ಗಾಂಧೀಜಿ ಮತ್ತು ಶಾಸ್ತ್ರೀಜಿ ದೇಶಕ್ಕಾಗಿ ಹೇಗೆ ಬದುಕಬೇಕು ಎಂಬುದನ್ನು ಬಾಳಿ ತೋರಿಸಿದ್ದಾರೆ. ಅವರ ಜೀವನದ ಆದರ್ಶದಲ್ಲಿ ನಾವುಗಳೆಲ್ಲ ನಡೆಯೋಣ ಎಂದರು. ಶಿಕ್ಷಕ ಎನ್.ವಿ. ಸಜ್ಜನರ ಮಾತನಾಡಿ, ನಂತರ ಮಕ್ಕಳಿಂದ ರಘುಪತಿ ರಾಘವ ರಾಜಾರಾಮ ಭಜನೆಯನ್ನು ಸುಶ್ರಾವ್ಯವಾಗಿ ವಿದ್ಯಾರ್ಥಿಗಳಿಂದ ಹಾಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯ ಅರುಣ ಬಿ. ಕುಲಕರ್ಣಿ ಮಾತನಾಡಿ ಗಾಂಧೀಜಿ ಮತ್ತು ಶಾಸ್ತ್ರೀಜಿ ನಮ್ಮ ದೇಶದ ಎರಡು ಕಣ್ಣುಗಳು. ಅವರ ಕಣ್ಣುಗಳ ಮೂಲಕ ನಾವು ದೇಶವನ್ನು ನೋಡಲು ಪ್ರಯತ್ನಿಸಿದರೆ ದೇಶದ ಅಭಿವೃದ್ದಿಯಲ್ಲಿ ನಮ್ಮ ಪಾತ್ರವೇನು? ಎಂಬುದು ತಿಳಿಯುತ್ತದೆ. ಆ ಮೂಲಕ ನಾವುಗಳು ಗಾಂಧೀಜಿಯವರ ದೇಶ ಪ್ರೇಮವನ್ನು, ಶಾಸ್ತ್ರೀಜಿಯವರ ಪ್ರಾಮಾಣಿಕತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಯತ್ನಿಸೋಣ ಎಂದರು. ವಿದ್ಯಾರ್ಥಿಗಳು ಗಾಂಧೀಜಿ ಮತ್ತು ಶಾಸ್ತ್ರೀಜಿಯವರನ್ನು ಕುರಿತು ಹಾಡು ಹೇಳಿದರು, ಭಾಷಣ ಮಾಡಿದರು.
ವೇದಿಕೆಯ ಮೇಲೆ ಶಿಕ್ಷಕ ಬಳಗದವರೆಲ್ಲರೂ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಕೊಟ್ರೇಶ ಮೆಣಸಿನಕಾಯಿ, ಶಾಲಾ ಪ್ರಧಾನಿ ಅರುಣ ಕಿರಟಗೇರಿ, ಭೀಮಪ್ಪ ಗಾಣಿಗೇರ ಇದ್ದರು.

 

► Follow us on –  Facebook / Twitter  / Google+

Sri Raghav

Admin