ಗಾಯಕ್ವಾಡ್ ಮೇಲೆ ಹೇರಿದ್ದ ವಿಮಾನಯಾನ ನಿಷೇಧ ವಾಪಸ್

Raveendra-Gayakwad

ನವದೆಹಲಿ,ಏ.8-ಶಿವ ಸೇನಾ ಸಂಸದ ರವೀದ್ರ ಗಾಯಕ್ವಾಡ್ ಅವರ ಮೇಲೆ ಹೆರಿದ್ದ ವಿಮಾನ ಯಾನ ನಿಷೇದವನ್ನು ಕೇಂದ್ರ ಸರ್ಕಾರ ತೆರವುಗೊಳಿಸಿದೆ. ಘಟನೆ ವಿಷಾಧ ವ್ಯಕ್ತಪಡಿಸಿ ಸಂಸದ ಗಾಯಕ್ವಾಡ್ ಕೇಂದ್ರ ವಿಮಾನಯಾನ ಸಚಿವ ಆಶೋಕ್ ಗಜಫತಿರಾಜ್ ಅವರಿಗೆ ಪತ್ರ ಬರೆದಿದ್ದರು. ಈ ಹಿನ್ನಲೆಯಲ್ಲಿ ರವೀಂದ್ರ ಗಾಯಾಕ್ವಾಡ್ ಅವರ ಮೇಲೆ ಹೇರಿದ್ದ ನಿಷೇದವನ್ನು ಕೇಂದ್ರ ಸರ್ಕಾರ ನಿಷೇಧ ವಾಪಾಸ್ಸು ಪಡೆದಿದೆ.

ವಿಮಾನದಲ್ಲಿ ಸೀಟು ವಿಚಾರಕ್ಕಾಗಿ ಏರ್ ಇಂಡಿಯಾ ಸಿಬ್ಬಂದಿಗೆ ಚಪ್ಪಲಿಯಿಂದ ಒಡೆದು ದುಂಡಾವರ್ತನೆ ತೋರಿದ್ದರು. ಈ ಹಿನ್ನಲೆಯಲ್ಲಿ ಏರ್ ಇಂಡಿಯ ವಿಮಾನ ಸೇರಿದಂತೆ ಖಾಸಗಿ ವಿಮಾನ ಸಂಸ್ಥೆಗಳು ದೇಶದ್ಯಾಂತ ಇವರ ಮೇಲೆ ವಿಮಾನಯಾನ ನಿಷೇಧ ಹೇರಿದ್ದವು.ಇದನ್ನು ತೆರವುಗೊಳೀಸಬೇಕೆಂದು ಗಾಯಕ್ವಾಡ್ ಕೇಂದ್ರಕ್ಕೆ ಪತ್ರ ಬರೆದಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin