ಗುಜರಾತ್‍ನ ಬರೂಚ್‍ನಲ್ಲಿ ಸಂಭವಿಸಿದ ಗ್ಯಾಸ್ ಪ್ಲಾಂಟ್ ಸ್ಫೋಟದಲ್ಲಿ ನಾಲ್ವರ ಸಾವು

gujarath--firing company

ಅಹಮದಾಬಾದ್, ನ.3- ಅನಿಲ ಘಟಕವೊಂದು ಸ್ಫೋಟಗೊಂಡ ಪರಿಣಾಮ ನಾಲ್ವರು ಕಾರ್ಮಿಕರು ಮೃತಪಟ್ಟು , ಅನೇಕರು ಗಾಯಗೊಂಡಿರುವ ಘಟನೆ ಇಂದು ಮಧ್ಯಾಹ್ನ ಗುಜರಾತ್‍ನ ಬರೂಚ್‍ನಲ್ಲಿ ಸಂಭವಿಸಿದೆ.ಅನಿಲ ಸೋರಿಕೆಯಿಂದ ಜಿಎನ್‍ಎಫ್‍ಸಿ ಕಂಪೆನಿಗೆ ಸೇರಿದ ಗ್ಯಾಸ್ ಪ್ಲಾಂಟ್ ಸ್ಫೋಟಗೊಂಡು ಈ ದುರಂತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

► Follow us on –  Facebook / Twitter  / Google+

Sri Raghav

Admin