ಗುಡ್ ನ್ಯೂಸ್ : ಎಂದಿನಂತೆ ಪೆಟ್ರೋಲ್ ಬಂಕ್ ಗಳಲ್ಲಿ ಡೆಬಿಟ್, ಕ್ರೆಡಿಟ್ ಕಾರ್ಡ್ ಬಳಸಬಹುದು..!
ಬೆಂಗಳೂರು. ಜ.09 : ಪೆಟ್ರೋಲ್ ಬಂಕ್ ಗಳಲ್ಲಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಸ್ವೀಕರಿಸುವುದಿಲ್ಲ ಎಂದು ನಿನ್ನೆ ಶಾಕ್ ನೀಡದ್ದ ಬಂಕ್ ಮಾಲೀಕರು, ತಮ್ಮ ನಿರ್ಧಾರವನ್ನು ಹಿಂಪಡೆದಿದ್ದಾರೆ. ಬ್ಯಾಂಕ್ಗಳು ಬಂಕ್ಗಳಲ್ಲಿ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ಗಳ ಬಳಕೆಗೆ ಶೇ.1 ರಷ್ಟು ವಹಿವಾಟು ಶುಲ್ಕ ವಿಧಿಸುತ್ತಿದ್ದನ್ನು ವಿರೋಧಿಸಿ ಬಂಕ್ ಮಾಲೀಕರು ನೀಡಲಾಗಿದ್ದ ಬಂದ್ಗೆ ಬ್ಯಾಂಕ್ ಗಳು ಕೊನೆಗೂ ಮಣಿದಿವೆ. ಎಂದಿನಂತೆ ಬಂಕ್ಗಳಲ್ಲಿ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಗಳನ್ನೂ ನೀವು ಬಳಸಬಹುದು.
ಪೆಟ್ರೋಲ್ ಬಂಕ್ ಮಾಲೀಕರ ಮೇಲೆ ಸರ್ವೀಸ್ ಚಾರ್ಜ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ನಗದು ನೀಡಿಯೇ ಪೆಟ್ರೋಲ್ , ಡೀಸೆಲ್ ಹಾಕಿಸಿಕೊಳ್ಳಿ ಎಂದು ಮಾಲೀಕರು ಹೇಳುತ್ತಿರುವುದು ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ನೀಡಿದ್ದರು. ಬ್ಯಾಂಕ್ಗಳ ವಹಿವಾಟು ಶುಲ್ಕದ ಹೇರಿಕೆ ಬಗೆಗಿನ ತೀರ್ಮಾನವನ್ನು ಸದ್ಯಕ್ಕೆ ಕೈ ಬಿಡಲಾಗಿದ್ದು, ಸದ್ಯದ ಮಟ್ಟಿಗೆ ಪೆಟ್ರೋಲ್ ಬಂಕುಗಳಲ್ಲಿ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ಗಳನ್ನು ಬಳಸಬಹುದು ಎಂದು ತಿಳಿದು ಬಂದಿದೆ.
ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಸ್ವೈಪ್ ಮೆಷಿನ್ ಅನ್ನು ವರ್ತಕರಿಗೆ ಒದಗಿಸುತ್ತಿರುವ ಹೆಚ್ಡಿಎಫ್ಸಿ ಹಾಗೂ ಆಕ್ಸಿಸ್ ಬ್ಯಾಂಕ್ಗಳು ಭಾನುವಾರ ರಾತ್ರಿಯಿಂದ ಶೇ.1ರಷ್ಟು ಸೇವಾ ಶುಲ್ಕವನ್ನು ಪೆಟ್ರೋಲ್ ಬಂಕ್ಗಳಿಂದ ಪಡೆದುಕೊಳ್ಳುವ ಹಿನ್ನಲೆಯಲ್ಲಿ ಪೆಟ್ರೋಲ್ ಬಂಕ್ ಮಾಲೀಕರು ಮುಷ್ಕರಕ್ಕೆ ಮುಂದಾಗಿದ್ದರು. ಸೇವಾ ಕ್ಷೇತ್ರಕ್ಕೆ ತೆಗೆದುಕೊಳ್ಳುವ ಹಣಕ್ಕೆ ನಮ್ಮ ಆಕ್ಷೇಪ ಇದೆ ಹೊರತು, ನಗದು ರಹಿತ ವ್ಯವಸ್ಥೆಗೆ ಅಲ್ಲ ಎಂದು ಪೆಟ್ರೋಲ್ ಬಂಕ್ಗಳ ಅಧ್ಯಕ್ಷ ರವೀಂದ್ರನಾಥ್ ಅವರು ಸ್ಪಷ್ಟ ಪಡಿಸಿದ್ದಾರೆ.