‘ಗುಲಾಬಿ ತೊಗೋಳಿ, ಹೆಲ್ಮೆಟ್ ಹಾಕ್ಕೊಳಿ’

tumakuru

ತುಮಕೂರು,ಜ.20-ಹೆಲ್ಮೆಟ್ ಧರಿಸಿ ಜೀವ ರಕ್ಷಿಸಿಕೊಳ್ಳುವಂತೆ ಪೊಲೀಸ್ ವರಿಷ್ಠಾಧಿಕಾರಿ ಇಶಾಪಂತ್ ಅವರು, ನಗರ ಪಾಲಿಕೆ ಆವರಣ ಹಾಗೂ ಟೌನ್‍ಹಾಲ್ ವೃತ್ತದಲ್ಲಿ ಬೈಕ್ ಸವಾರರನ್ನು ನಿಲ್ಲಿಸಿ ಅವರಿಗೆ ಗುಲಾಬಿ ಹೂ ನೀಡುವ ಮೂಲಕ ಕಾನೂನು ಸುವ್ಯವಸ್ಥೆಗಳನ್ನು ಪಾಲಿಸಬೇಕೆಂದು ತಿಳಿಸಿದರು. ಪೊಲೀಸ್ ಇಲಾಖೆಯನ್ನು ಜನಸ್ನೇಹಿಯಾಗಿ ರೂಪಿಸುವ ಪಣ ತೊಟ್ಟಿದ್ದು , ಸಾರ್ವಜನಿಕರು ಇದಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಜನತೆ ಯಾವುದೇ ಸಮಸ್ಯೆ ಇದ್ದರೂ ದಿನದ 24 ಗಂಟೆಯೂ ಕೂಡ ನನನ್ನು ಕಚೇರಿ ಅಥವಾ ಮನೆಯಲ್ಲಿ ನೇರವಾಗಿ ಕಾಣಬಹುದಾಗಿದೆ ಎಂದರು. ಕಳೆದ ವರ್ಷ ನಗರದಲ್ಲಿ ಹೆಲ್ಮೆಟ್ ಕಡ್ಡಾಯ ಮಾಡಲಾಗಿತ್ತು. ಆದರೆ ಅಧಿಕೃತವಾಗಿ ಯಾರೂ ಹೆಲ್ಮೆಟ್‍ನ್ನು ಧರಿಸುತ್ತಿರಲಿಲ್ಲ.

ಹಾಗಾಗಿ ಇಂದಿನಿಂದ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಕಡ್ಡಾಯವಾಗಿ ಧರಿಸುವ ಮೂಲಕ ತಮ್ಮ ಅಮೂಲ್ಯವಾದ ಜೀವವನ್ನು ಕಾಪಾಡಿಕೊಳ್ಳಬೇಕೆಂದು ಅವರು ಮನವಿ ಮಾಡಿದರು. ಕೆಲವರು ಹೆಲ್ಮೆಟ್ ಇಲ್ಲದೆ ಬೈಕ್‍ನ್ನು ಮುಟ್ಟುವುದೇ ಇಲ್ಲ ಎಂದು ಎಸ್ಪಿಯವರ ಎದುರು ಪ್ರತಿಜ್ಞೆಯನ್ನೂ ಮಾಡಿದರು. ಈ ಸಂದರ್ಭದಲ್ಲಿ ನಗರ ಡಿವೈಎಸ್ಪಿ ಚಿದಾನಂದಸ್ವಾಮಿ, ಇನ್‍ಸ್ಪೆಕ್ಟರ್ ಗಂಗುಲಿಂಗಯ್ಯ, ಟ್ರಾಫಿಕ್ ಸಬ್‍ಇನ್‍ಸ್ಪೆಕ್ಟರ್‍ಗಳಾದ ವಿಜಯಲಕ್ಷ್ಮಿ , ಲಕ್ಷ್ಮಣ್ ಸೇರಿದಂತೆ ಮತ್ತಿತರರು ಭಾಗಿಯಾಗಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Sri Raghav

Admin