ಗುಲಾಬಿ ನೀಡಿ ತಂಬಾಕು ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸಿದ ಶಾಲಾ ಮಕ್ಕಳು
ಹಾಸನ,ಫೆ.4-ಜಿಲ್ಲೆಯ ಆಲೂರು ತಾಲ್ಲೂಕಿನ ತಾಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ಹಾಗೂ ಶಿಕ್ಷಕ ವೃಂದದಿಂದ ಇಂದು ಗುಲಾಬಿ ಚಳುವಳಿ ನಡೆಸುವ ಮೂಲಕ ತಂಬಾಕು ಸೇವೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿದರು. ಇಂದು ಶಾಲೆಯಿಂದ ಹೊರಟ ಶಾಲಾ ಮಕ್ಕಳು, ಶಿಕ್ಷಕರು ಊರಿನ ಬೀದಿಬೀದಿಗಳಿಗೆ ತೆರಳಿ ತಂಬಾಕು, ಗುಟ್ಕಾ ಮಾರುವ ಅಂಗಡಿಗಳಿಗೆ ಭೇಟಿ ನೀಡಿ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿದರು. ರಸ್ತೆಬದಿ ಹೋಗುತ್ತಿದ್ದವರನ್ನು ಅಡ್ಡಹಾಕಿ ಗುಲಾಬಿ ಹೂವು ನೀಡಿ ತಂಬಾಕು ತಂಬಾಕು ಸೇವನೆಯಿಂದ ಆರೋಗ್ಯಕ್ಕೆ ಹಾನಿಕರ. ಹೀಗಾಗಿ ತಂಬಾಕು ಬಿಡಿ, ಇತರರಿಗೂ ಅರಿವು ಮೂಡಿಸಿ ಎಂದು ತಿಳಿಹೇಳಿದರು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಪರಾಶರಮೂರ್ತಿ, ಶಿಕ್ಷಕರಾದ ಕೊಟ್ರೇಶ್.ಎಸ್ ಸೇರಿದಂತೆ ಎಸ್ಡಿಎಂಸಿ ಸದಸ್ಯರು ಗುಲಾಬಿ ಚಳುವಳಿಯಲ್ಲಿ ಪಾಲ್ಗೊಂಡಿದ್ದರು.
< Eesanje News 24/7 ನ್ಯೂಸ್ ಆ್ಯಪ್ >