ಗೂಡ್ಸ್ ಗಾಡಿ ಡಿಕ್ಕಿ : ಪಾದಚಾರಿ ಸಾವು

accident

ಮಳವಳ್ಳಿ, ಆ.30-ತಾಲ್ಲೂಕಿನ ಬಸವನಪುರದ ಬಳಿ ಅಪರಿಚಿತ ಪಾದಚಾರಿ ಒಬ್ಬರಿಗೆ ಗೂಡ್ಸ್ ಗಾಡಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.ಮಧ್ಯಾಹ್ನ 3.30ರ ಸಮಯದಲ್ಲಿ ಸುಮಾರು 50ವರ್ಷದ ಅಪರಿಚಿತ ಪಾದಚಾರಿ ನಡೆದುಕೊಂಡು ಹೋಗುತ್ತಿರುವಾಗ ಈ ಅಪಘಾತ ಸಂಬವಿಸಿದ್ದು ಶವವನ್ನು ಮಂಡ್ಯ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ.ಮೃತರ ಗುರುತು ಪತ್ತೆ ಆಗಿಲ್ಲ. ಈ ಬಗ್ಗೆ ಮಳವಳ್ಳಿ ಗ್ರಾಮಾಂತರ ಪೊಲೀಸರು ಕೇಸು ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಕೋಲು ಮುಖ,ದೃಢಕಾಯ ಶರೀರ,5.6ಅಡಿ ಎತ್ತರ, ಕುರುಚಲು ಬಿಳಿ ಕಪ್ಪು ಮಿಶ್ರಿತ ಗಡ್ಡ, ಕಪ್ಪುಬಿಳಿ ತಲೆಕೂದಲು, ಬಲಗೈ ಮೇಲೆ ಮಣಿಯಮ್ಮ, ಎಂ. ಪ್ರಭಾಕರ ಎದೆಯ ಮೇಲೆ ಎಂ ಮಾದಶೆಟ್ಟಿ, ಮಮತ ಎಂಬ ಹಸಿರು ಹಚ್ಚೆ ಹಾಕಿಸಿರುತ್ತಾನೆ.ಯಾರಾದರು ಇದ್ದರೆ  ಮಳವಳ್ಳಿ ಗ್ರಾಮಂತರ ಠಾಣೆ ಸಂಪರ್ಕಿಸಬೇಕೆಂದು ತಿಳಿಸಿದ್ದಾರೆ.

► Follow us on –  Facebook / Twitter  / Google+

Sri Raghav

Admin