ಗೃಹ ಬಳಕೆ LPG ಸಿಲಿಂಡರ್ ಬೆಲೆಯಲ್ಲಿ 2.07 ರೂ. ಹೆಚ್ಚಳ
ನವದೆಹಲಿ, ಡಿ.1- ಗೃಹ ಬಳಕೆ, ಎಲ್ಪಿಜಿ ಸಿಲಿಂಡರ್ಗಳ (ಸಬ್ಸಿಡಿ ಸಹಿತ) ದರವನ್ನು ತತ್ಕ್ಷಣದಿಂದ ಜಾರಿಗೆ ಬರುವಂತೆ 2.07 ರೂ. ಏರಿಕೆ ಮಾಡಲಾಗಿದೆ. ಇದರ ಜತೆಗೆ ಮಧ್ಯರಾತ್ರಿಯಿಂದಲೇ ಪೆಟ್ರೋಲ್ ಬೆಲೆಯೂ ಸಹ 13 ಪೈಸೆ ಏರಿಕೆಯಾಗಿದೆ. ಮತ್ತು ಡೀಸೆಲ್ ಬೆಲೆಯಲ್ಲಿ 12 ಪೈಸೆ ಇಳಿಕೆ ಮಾಡಲಾಗಿದೆ. ಕಳೆದ ಎರಡು ತಿಂಗಳ ಹಿಂದೆ ಎಲ್ಪಿಜಿ ದರವನ್ನು 1ರೂ. ಏರಿಕೆ ಮಾಡಲಾಗಿತ್ತು. ಆದರೆ, ಡಿಸೆಂಬರ್ ಆರಂಭದಲ್ಲೇ ಈಗ 2.07ರೂ. ಏರಿಸಿರುವುದಕ್ಕೆ ಗೃಹಿಣಿಯರು ಅಪಸ್ವರ ಎತ್ತಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ಪೆಟ್ರೋಲ್ ಪ್ರತಿ ಲೀಟರ್ ಬೆಲೆ 70.96, ಡೀಸೆಲ್ ಬೆಲೆ 58.39 ಇದೆ. ಇದೆ ವೇಳೆ ವಿಮಾನಗಳಿಗೆ ಬಳಸುವ ಜೆಟ್ ಇಂಧನದಲ್ಲಿ ಶೇ.3.7 ರಷ್ಟು ಇಳಿಕೆ ಮಾಡಲಾಗಿದೆ.
Jet fuel prices cut by 3.7%, #domesticLPG rate hiked by Rs 2.07 per cylinder.
— Press Trust of India (@PTI_News) December 1, 2016