ಗೋಲ್ಡನ್ ಟೆಂಪಲ್‍ಗೆ ಭೇಟಿ ನೀಡಿದ್ದಾಗ ಮೋದಿ ಧರಿಸಿದ ಟೋಪಿ ಕುರಿತ ಹೊಸ ವಿವಾದ ಸೃಷ್ಟಿ

Modi-Cap

ಚಂಡೀಗಡ, ಡಿ.8-ಅಮೃತಸರದ ಗೋಲ್ಡನ್ ಟೆಂಪಲ್‍ಗೆ ಭೇಟಿ ನೀಡಿದ್ದಾಗ ಪ್ರಧಾನಿ ನರೇಂದ್ರ ಮೋದಿ ಧರಿಸಿದ ಟೋಪಿಯ ಬಗ್ಗೆ ಈಗ ವಿವಾದ ಸೃಷ್ಟಿಯಾಗಿದ್ದು, ಗುರುದ್ವಾರದ ಆಡಳಿತ ಮಂಡಳಿ ಈ ಬಗ್ಗೆ ಸಿಖ್ ಧಾರ್ಮಿಕ ಗುರುಗಳನ್ನು ಪ್ರಶ್ನಿಸಿದೆ. ಇದು ಸಿಖ್ ಧಾರ್ಮಿಕ ನಿಯಮಗಳಿಗೆ ಸಂಬಂಧಿಸಿದ ವಿಷಯವಾಗಿದ್ದು, ಸಿಖ್ ಧಾರ್ಮಿಕ ಗುರುಗಳ ವ್ಯಾಪ್ತಿಯಲ್ಲಿ ಬರುತ್ತದೆ. ಹೀಗಾಗಿ ಮೋದಿ ಭೇಟಿ ಸಂದರ್ಭದಲ್ಲಿ ಧಾರ್ಮಿಕ ನಿಯಮ ಉಲ್ಲಂಘನೆಯಾಗಿದೆಯೇ ಎಂದು ಪರಿಶೀಲಿಸುವಂತೆ ಮನವಿ ಮಾಡಿದ್ದೇವೆ ಎಂದು ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿಯ ಅಧ್ಯ? ಕೃಪಾಲ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಗುರುದ್ವಾರಕ್ಕೆ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ತಮ್ಮ ತಲೆಯನ್ನು ವಸ್ತ್ರದಿಂದ ಸುತ್ತಿಕೊಳ್ಳುವ ಬದಲು ಟೋಪಿ ಧರಿಸಿದ್ದಾರೆ. ಇದು ಸಿಖ್ ಧಾರ್ಮಿಕ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಾದ ಬೆನ್ನಲೇ ಎಸ್ಜಿಪಿಸಿ (ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ) ಈ ಬಗ್ಗೆ ತನಿಖೆ ನಡೆಸುವಂತೆ ಹೇಳಿದೆ.  ಡಿ. 3ರಂದು ಹಾರ್ಟ್ ಆಫ್ ಏಷ್ಯಾ ಸಮ್ಮೇಳನದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ಜೊತೆಯಾಗಿ ಅಮೃತಸರದ ಗೋಲ್ಡನ್ ಟೆಂಪಲ್‍ಗೆ ಭೇಟಿ ನೀಡಿದ್ದರು. ಈ ವೇಳೆ ಇಬ್ಬರು ನಾಯಕರು ಟೋಪಿ ಧರಿಸಿದ್ದರು. ಇನ್ನು ಶಿಖ್ ಗುರುದ್ವಾರಗಳಿಗೆ ಭೇಟಿ ನೀಡುವವರು ಕಡ್ಡಾಯವಾಗಿ ಶಿರವಸ್ತ್ರ ಧರಿಸಬೇಕು ಅಥವಾ ಬಟ್ಟೆಯನ್ನು ತಲೆಗೆ ಸುತ್ತಿರಬೇಕು ಎಂಬ ನಿಯಮವಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin