ಗೋವಾದಲ್ಲಿ ಕನ್ನಡಿಗರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿ, ಮನೆಗಳಿಗೆ ಬೆಂಕಿಯಿಟ್ಟ ಪುಂಡರು..!

Goa-Kannadiga

ಪಣಜಿ. ಅ.22- ಕರಾವಳಿ ರಾಜ್ಯ ಗೋವಾದಲ್ಲಿ ಕನ್ನಡಿಗರ ಮೇಲೆ ಮತ್ತೆ ದೌರ್ಜನ್ಯ ಎಸಗಿರುವ ಘೋರ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ. ಕೆಲಸ ಅರಸಿ ಗೋವಾಗೆ ತೆರಳಿದ್ದ ಹುಬ್ಬಳ್ಳಿ-ಧಾರವಾಡದ ಐದು ಕನ್ನಡಿಗರ ಕುಟುಂಬಗಳ ಮನೆಗಳ ಮೇಲೆ ಪುಂಡರು ದಾಳಿ ನಡೆಸಿದರು.   ಮೂರು ಕಾರುಗಳು ಮತ್ತು ಮೂರು ಬೈಕ್‍ಗಳಿಗೆ ಬೆಂಕಿ ಹಚ್ಚಿ, ಬೆಲೆಬಾಳುವ ವಸ್ತುಗಳನ್ನೂ ಧ್ವಂಸಗೊಳಿಸಿ, ಅಮಾಯಕರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿರುವ ಹೀನಾಯ ಕೃತ್ಯ ಗೋವಾದ ಪೆÇಂಡಾ ತಾಲ್ಲೂಕಿನ ಉಸಗಾಂವ್ ಮತ್ತು ತೀಸ್ಕ ಗ್ರಾಮದಲ್ಲಿ ನಡೆದಿದೆ.  ಪುಂಡರ ದಾಳಿಯಿಂದ ಕಂಗಾಲಾಗಿರುವ ಕನ್ನಡಿಗರು ರಕ್ಷಣೆ ಕೋರಿ ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿದ್ದರೆ. ಕನ್ನಡಿಗರ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಹುಬ್ಬಳ್ಳಿ-ಧಾರವಾಡ ಅವಳಿಗಳಲ್ಲಿ ಪ್ರತಿಭಟನೆ ಭುಗಿಲೆದ್ದಿದೆ.

0f422a0d-856b-406b-bd25-3a92676ba232

ಘಟನೆ ವಿವರ :

ಉದ್ಯೋಗ ಅರಿಸಿ ಅವಳಿನಗರದ ಐದು ಕುಟುಂಬಗಳು ಗೋವಾಗೆ ತೆರಳಿದ್ದರು. ಪೆÇಂಡಾ ತಾಲ್ಲೂಕಿನ ಉಸಗಾಂವ್ ಮತ್ತು ತೀಸ್ಕ ಗ್ರಾಮದಲ್ಲಿ ನೆಲೆಸಿದ್ದರು. ಅ.15ರಂದು ಸುಮಾರು 200ಕ್ಕೂ ಹೆಚ್ಚು ಪುಂಡರು ಕನ್ನಡಿಗರ ಮನೆಗಳ ಮೇಲೆ ಏಕಾಏಕಿ ದಾಳಿ ನಡೆಸಿ ವಸುಗಳನ್ನು ಧ್ವಂಸಗೊಳಿಸಿ ಆರು ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಗೋವಾ ಬಿಟ್ಟು ತೊಲಗಿ ಇಲ್ಲದಿದ್ದರೆ ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದರು. ಪುಂಡರ ದಾಳಿ ಮತ್ತು ದೌರ್ಜನ್ಯದಿಂದ ಕಂಗಾಲಾದ ಕನ್ನಡಿಗರ ಕುಟುಂಬಗಳು ತಮ್ಮ ಊರುಗಳಿಗೆ ವಾಪಸ್ ಬಂದಿದ್ದು, ತಮಗೆ ಜೀವ ಬೆದರಿಕೆ ಇದೆ ಕನ್ನಡಿಗರ ಕುಟುಂಬಗಳಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಸರ್ಕಾರದ ಮೊರೆ ಹೋಗಿದ್ದಾರೆ. ತಮ್ಮ ಮೇಲೆ ನಡೆದಿರುವ ಅಮಾನವೀಯ ಕೃತ್ಯಗಳನ್ನು ವಿವರಿಸಿದ್ದಾರೆ.

1d447c5b-92c8-44a2-a49b-694efca14d00

ಭುಗಿಲೆದ್ದ ಪ್ರತಿಭಟನೆ :

ಕನ್ನಡಿಗರ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಹುಬ್ಬಳ್ಳಿ-ಧಾರವಾಡ ಅವಳಿಗಳಲ್ಲಿ ಪ್ರತಿಭಟನೆ ಭುಗಿಲೆದ್ದಿದೆ. ಜೆಡಿಎಸ್ ಮತ್ತು ವಿವಿಧ ಸಂಘಟನೆಗಳ ಕಾರ್ಯಕರ್ತರು ಈ ಕೃತ್ಯವನ್ನು ಖಂಡಿಸಿ ಪ್ರತಿಭಟನೆ ನಡೆಸಿ ಕನ್ನಡಿಗರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಮನವಿ ಮಾಡಿದರು. ಈ ಹಿಂದೆ ಗೋವಾದ ಬೈನಾ ಬೀಚ್‍ನಲ್ಲಿದ್ದ ಕನ್ನಡಿಗರನ್ನು ಅಮಾನವೀಯವಾಗಿ ಹೊರಹಾಕಲಾಗಿತ್ತು. ಈ ಸಂಬಂಧ ಕರ್ನಾಟಕ ಸರ್ಕಾರವು ಆಗಿನ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರೊಂದಿಗೆ ಸಮಸ್ಯೆ ಇತ್ಯಥ್ರ್ಯಕ್ಕಾಗಿ ಹಿರಿ ಸಚಿವ ಆರ್.ವಿ.ದೇಶಪಾಂಡೆ ಅವರನ್ನು ಆ ರಾಜ್ಯಕ್ಕೆ ರವಾನಿಸಿತ್ತು.

96f4ff85-a9a8-43a8-a138-748fa619f63c

ಕನ್ನಡಿಗರ ಸಹನೆ ಪರೀಕ್ಷೆ :

ಕರಾವಳಿ ರಾಜ್ಯವಾದ ಗೋವಾ ಸರ್ಕಾರ ಕನ್ನಡಿಗರ ಸಹನೆ-ಸೈರಣೆಯನ್ನು ಪರೀಕ್ಷಿಸುತ್ತಿದೆ. ನಮ್ಮ ಔದಾರ್ಯವೇ ನಮಗೆ ಮುಳವಾಗುವಂಥ ವಾತಾವರಣ ಗೋವಾದಲ್ಲಿ ಸೃಷ್ಟಿಯಾಗಿದೆ. ಗೋವಾ ಮತ್ತು ಕರ್ನಾಟಕ ರಾಜ್ಯ ಸರ್ಕಾರಗಳ ರಾಜಕೀಯ ದ್ವೇಷ, ಪಕ್ಷಪಾತ ಮತ್ತು ಆದಾಯದ ಲೆಕ್ಕಾಚಾರಕ್ಕೆ ಅಲ್ಲಿನ ಕನ್ನಡಿಗರು ಮತ್ತೆ ಮತ್ತೆ ದುರಾವಸ್ಥೆಗೆ ಒಳಗಾಗುತ್ತಿದ್ದಾರೆ.
ರಾಜಕೀಯ ಸ್ವಾರ್ಥಕ್ಕಾಗಿ ಗೋವಾದ ಕನ್ನಡಿಗರನ್ನು ಬಲಿಪಶುಗಳಾಗಿ ಮಾಡುವುದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆ ಸ್ವಾಭಿಮಾನಿ ಕನ್ನಡಿಗರಲ್ಲಿ ಎದ್ದಿದೆ. ಗೋವಾ ತೀರದ ರಾಜಕೀಯ ದಳ್ಳುರಿ ಹಾಗೂ ಕಾಂಗ್ರೆಸ್ ಮತದಾರರು ಎಂಬ ಕಾರಣಕ್ಕಾಗಿ ಕನ್ನಡಿಗರ ಮನೆಗಳನ್ನು ಗೋವಾ ಸರ್ಕಾರ ಈ ಹಿಂದೆ ಕೆಡವಿತ್ತು

490b9226-178a-464a-aec8-3c16ce8e701b

ಗೋವಾ ಸರ್ಕಾರವು ಅಸುರಕ್ಷತೆಯ ನೆಪವೊಡ್ಡಿ ಬೈನಾ ಕಡಲತೀರದಲ್ಲಿದ್ದ ಸುಮಾರು 350ಕ್ಕೂ ಹೆಚ್ಚು ಮನೆಗಳನ್ನು ತೆರವುಗೊಳಿಸಲು ನಿರ್ಧರಿಸಿತ್ತು. ಮೊದಲ ಹಂತವಾಗಿ 82 ಮನೆಗಳಿಗೆ ನೋಟಿಸ್ ಜಾರಿ ಮಾಡಿ, ಜುಲೈ 11ರಂದು ದಕ್ಷಿಣ ಗೋವಾ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜೆಸಿಬಿ ಯಂತ್ರಗಳ ಮೂಲಕ ಮನೆಗಳನ್ನು ತೆರವುಗೊಳಿಸಲು ಮುಂದಾಯಿತು.
ಆಗ ಕನ್ನಡಿಗರೇ ಆದ ಗೋವಾದ ಯಮನಪ್ಪ ಕೋರ್ಟ್‍ನಿಂದ ತಡೆಯಾಜ್ಞೆ ತಂದರು, ಈ ವೇಳೆಗಾಗಲೇ 74 ಮನೆಗಳು ನೆಲಸಮಗೊಂಡು, 300ಕ್ಕೂ ಅಧಿಕ ಕುಟುಂಬಗಳು ಅತಂತ್ರಕ್ಕೆ ಸಿಲುಕಿದ್ದವು.  ಸರ್ಕಾರದ ನಿರ್ಲಕ್ಷ್ಯ ಮನೋಭಾವನೆ ಹಾಗೂ ಕರ್ನಾಟಕ ಸರ್ಕಾರ ಮಧ್ಯಸ್ಥಿಕೆ ವಹಿಸದ ಕಾರಣ ಸಂತ್ರಸ್ತ ಕನ್ನಡಿಗರ ಸ್ಥಿತಿ ಅತಂತ್ರವಾಗಿದೆ. ಈಗಲಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮಕ್ಕೆ ಮುಂದಾಗಬೇಕು.

ಗೋವಾದಲ್ಲಿ ಕನ್ನಡಿಗರ ಮೇಲೆ ಹಲ್ಲೆ ಖಂಡಿಸಿ ಕರವೇ ಸ್ವಾಭಿಮಾನಿ ಬಣ ಪ್ರತಿಭಟನೆ

ಬೆಳಗಾವಿ, ಅ.22-ಗೋವಾದ ಟಸ್ಕ್‍ಉಸಗಾಂವ್ ಮತ್ತು ಪೊಂಡಾದಲ್ಲಿ ಕನ್ನಡಿಗರ ಕುಟುಂಬಗಳ ಮೇಲೆ ದಾಳಿ ನಡೆಸಿ ಮನೆ ಹಾಗೂ ವಾಹನಗಳನ್ನು ಸುಟ್ಟು ಹಾಕಿರುವ ಪ್ರಕರಣವನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಕಾರ್ಯಕರ್ತರು ಇಂದು ನಗರದ ಚೆನ್ನಮ್ಮ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಗೋವಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪೊಂಡಾ ನಗರದಲ್ಲಿ ಸುಮಾರು 50 ವರ್ಷಗಳಿಂದ 500ಕ್ಕೂ ಹೆಚ್ಚು ಕನ್ನಡಿಗ ಕುಟುಂಬಗಳು ನೆಲೆಸಿದ್ದು, ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಸೌಹಾರ್ದಯುತವಾಗಿ ಜೀವನ ಸಾಗಿಸುತ್ತಿದ್ದಾರೆ.

ಆದರೆ ಗೋವಾ ಜನ ಕನ್ನಡಿಗ ವಾಹನ ಚಾಲಕರ ಮೇಲೆ ಹಲ್ಲೆ ನಡೆಸಿದ್ದರು. ಇದನ್ನು ಆತನ ಪೋಷಕರು ಪ್ರಶ್ನಿಸಿದ್ದಕ್ಕೆ ನಿಂದಿಸಿ ಅವರ ಮೇಲೂ ಹಲ್ಲೆ ಮಾಡಿ ಆಸ್ತಿ ಪಾಸ್ತಿಯನ್ನು ಸುಟ್ಟು ಹಾಕಿದ್ದಾರೆ. ಇದೊಂದು ಹೇಯ ಕೃತ್ಯವಾಗಿದ್ದು, ಕೂಡಲೇ ಕನ್ನಡಿಗರ ಆಸ್ತಿ-ಪಾಸ್ತಿ ಸುಟ್ಟು ಹಾಕಿರುವವ ಮೇಲೆ ಕ್ರಮ ಕೈಗೊಳ್ಳಬೇಕೆಂದು ಸ್ವಾಭಿಮಾನಿ ಬಣದ ಮುಖಂಡರು ಒತ್ತಾಯಿಸಿದ್ದಾರೆ.
ಪೊಲೀಸ್ ಇಲಾಖೆ ಕನ್ನಡಿಗರ ಮೇಲೆ ದೌರ್ಜನ್ಯ ನಡೆಸಿದವರ ವಿರುದ್ಧ ಕ್ರಮಕೈಗೊಳ್ಳುವುದು ಬಿಟ್ಟು, ಹಲ್ಲೆಗೊಳಗಾದ ಕನ್ನಡಿಗರ ಮೇಲೆಯೇ ಗೂಂಡಾ ಕಾಯ್ದೆ ಹೇರಲು ಪ್ರಯತ್ನಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.  ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಗೋವಾ ಮುಖ್ಯಮಂತ್ರಿಯೊಂದಿಗೆ ಮಾತುಕತೆ ನಡೆಸಿ ಕನ್ನಡಿಗರಿಗೆ ನ್ಯಾಯ ಒದಗಿಸಬೇಕೆಂದು ಕರವೇ ಸ್ವಾಭಿಮಾನಿ ಬಣದ ದೀಪಕ್ ಗುಡಗನಟ್ಟಿ ಮತ್ತಿತರರು ಆಗ್ರಹಿಸಿದ್ದಾರೆ.

► Follow us on –  Facebook / Twitter  / Google+

Sri Raghav

Admin