ಗ್ಯಾಸ್ ರೀಫಿಲಿಂಗ್ ಮಾಡುವ ವೇಳೆ ಸಿಲಿಂಡರ್ ಸ್ಫೋಟ : ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ
ಕುಣಿಗಲ್,ಫೆ.6- ಗ್ಯಾಸ್ ರೀಫಿಲಿಂಗ್ ಮಾಡುವ ವೇಳೆ ಸಿಲಿಂಡರ್ ಸ್ಫೋಟಗೊಂಡು ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೆಆರ್ಎಸ್ ಅಗ್ರಹಾರದ ಹೊಸಬಡಾವಣೆ ನಿವಾಸಿ ಖುರ್ಷಿದ್ ಉನ್ನೀರಾ(50) ಮೃತಪಟ್ಟ ಮಹಿಳೆ. ನಿನ್ನೆ ಮಧ್ಯಾಹ್ನ ಪಟ್ಟಣದ ಕೆಆರ್ಎಸ್ ಅಗ್ರಹಾರದ ಹೊಸ ಬಡಾವಣೆಯಲ್ಲಿ ರಜಾಕ್ ಎಂಬುವರು ಒಂದು ಸಿಲಿಂಡರ್ನಿಂದ ಮತ್ತೊಂದು ಸಿಲಿಂಡರ್ಗೆ ಗ್ಯಾಸ್ ತುಂಬುತ್ತಿದ್ದ ವೇಳೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡು ಸಿಲಿಂಡರ್ ಸ್ಪೋಟಗೊಂಡು 6 ಜನರು ಗಾಯಗೊಂಡಿದ್ದರು.
ಗಾಯಾಳುಗಳಿಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಖುರ್ಷಿದ ಉನ್ನಿರಾ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಈ ಸಂಬಂಧ ಸಿಪಿಐ ಬಾಳೇಗೌಡ, ಪಿಎಸ್ಐ ಕೇಶವಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಟ್ಟಣ ಪೊಲೀಸ್ ಠಾಣೆ ಪ್ರಕರಣ ದಾಖಲು ಮಾಡಲಾಗಿದೆ.
< Eesanje News 24/7 ನ್ಯೂಸ್ ಆ್ಯಪ್ >