ಗ್ರಾಫಿಕ್‍ನಲ್ಲಿ ವಿಷ್ಣುವರ್ಧನ್ ಮರುಜನ್ಮದ ‘ನಾಗರಹಾವು’ ಸಿನಿಮಾ ವೀಕ್ಷಿಸಲಿರುವ ರಜನಿ

Spread the love

Nagarahavu

ಚೆನ್ನೈ,ಅ.12-ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ ಗ್ರಾಫಿಕ್‍ನಲ್ಲಿ ಮರುಸೃಷ್ಟಿಯಾಗಿರುವ ಹಾಗೂ ನಟಿ ಮತ್ತು ಮಾಜಿ ಸಂಸದೆ ರಮ್ಯಾ ಅಭಿನಯದ ಬಹು ನಿರೀಕ್ಷಿತ ನಾಗರಹಾವು ಚಿತ್ರವನ್ನು ಸೂಪರ್‍ಸ್ಟಾರ್ ರಜನಿಕಾಂತ್ ಇಂದು ಸಂಜೆ ವೀಕ್ಷಿಸಲಿದ್ದಾರೆ.  ವಿಷ್ಣು ಮತ್ತು ರಜನಿ ಮೊದಲಿನಿಂದಲೂ ಆಪ್ತಮಿತ್ರರು. ಕನ್ನಡದಲ್ಲಿ ಇವರಿಬ್ಬರು ಒಟ್ಟಿಗೆ ನಟಿಸಿದ್ದ ಸಿನಿಮಾಗಳು ಸೂಪರ್‍ಹಿಟ್ ಆಗಿವೆ. ಸಾಹಸಸಿಂಹ ಅಭಿನಯಿಸಿದ್ದ ಆಪ್ತಮಿತ್ರ ಯಶಸ್ಸಿನಿಂದ ಪ್ರೇರಣೆ ಪಡೆದ ಚಂದ್ರಮುಖಿಯಲ್ಲಿ ರಜನಿ ನಟಿಸಿದ್ದರು.  ಹಲವು ವಿಶೇಷತೆಗಳನ್ನು ಹೊಂದಿರುವ ನಾಗರಹಾವು ಶುಕ್ರವಾರ ಬಿಡುಗಡೆಯಾಗಲಿದ್ದು, ಅದಕ್ಕೆ ಪೂರ್ವಭಾವಿಯಾಗಿ ಇಂದು ಚೆನ್ನೈನಲ್ಲಿ ಆಯೋಜಿಸಿರುವ ಪ್ರೀಮಿಯರ್ ಶೋನಲ್ಲಿ ರಜನಿ ಈ ಚಿತ್ರ ವೀಕ್ಷಣೆ ಮಾಡಲಿದ್ದಾರೆ.

ಡಾ. ವಿಷ್ಣುವರ್ಧನ್‍ರನ್ನು ಈ ಸಿನಿಮಾದಲ್ಲಿ ವಿಶೇಷ ಗ್ರಾಫಿಕ್ ತಂತ್ರಜ್ಞಾನದಿಂದ ಮರುಸೃಷ್ಟಿಸಲಾಗಿದೆ. ಎರಡು ವರ್ಷಗಳ ನಂತರ ರಮ್ಯಾ ಮತ್ತೆ ಬಣ್ಣ ಹಚ್ಚಿದ್ದಾರೆ. ತೆಲುಗಿನ ಸೂಪರ್‍ಹಿಟ್ ಅರುಂಧತಿ ಸಿನಿಮಾದ ತಂಡ ನಾಗರಹಾವು ಚಿತ್ರದಲ್ಲಿ ಕೆಲಸ ಮಾಡಿದೆ.

► Follow us on –  Facebook / Twitter  / Google+

Sri Raghav

Admin