ಗ್ರಾಮೀಣ ಪ್ರತಿಭೆಗಳಿಗೆ ಸರಿಯಾದ ಮಾರ್ಗದರ್ಶನ ಅಗತ್ಯ : ಸಿಪಿವೈ
ಚನ್ನಪಟ್ಟಣ, ಆ.15- ಗ್ರಾಮೀಣ ಪ್ರತಿಭೆಗಳಿಗೆ ಸರಿಯಾದ ಮಾರ್ಗದರ್ಶನ ಸಿಕ್ಕರೆ ಗುರಿ ಸಾಧಿಸಿ ದೇಶದ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ ಎಂದು ಶಾಸಕ ಸಿ.ಪಿ.ಯೋಗೀಶ್ವರ್ ಅಭಿಪ್ರಾಯಪಟ್ಟರು. ನಗರದ ಶತಮಾನೋತ್ಸವ ಭವನದಲ್ಲಿ ಹಮ್ಮಿಕೊಂಡಿದ್ದ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸರಿಯಾದ ಮಾರ್ಗದರ್ಶಿ ಗಳಿಲ್ಲದೇ ಗೊಂದಲ ದಿಂದ ಕೂಡಿರುತ್ತಾರೆ. ಮನೆಯ ಸಮಸ್ಯೆಯಿಂದ ಒತ್ತಡದಿಂದ ಬಳಲುತ್ತಿರುತ್ತಾರೆ ತಾನು ಹೆಚ್ಚಿನದಾಗಿ ಓದಬೇಕೆಂಬ ಹಂಬಲವಿದ್ದರೂ ಮುಂದೆ ಗುರಿ ಇಲ್ಲದೆ ಜೀವನದಲ್ಲಿ ಸೋಲುತ್ತಾರೆ. ಆ ಸಂದರ್ಭದಲ್ಲಿ ಅವರಿಗೆ ಸೂಕ್ತವಾದ ಮಾರ್ಗಸೂಚಿ ಸಿಕ್ಕರೆ ಉತ್ತಮವಾದ ಭವಿಷ್ಯವನ್ನು ರೂಪಿಸಿಕೊಳ್ಳುತ್ತಾರೆ ಎಂದರು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಪ್ರೊ .ಕೆ.ಮಲ್ಲಯ್ಯ, ಗ್ರಾಮೀಣ ಪ್ರದೇಶದ ಮಕ್ಕಳು ಸಮಾಜದ ಸಾಮಾಜಿಕ ಸ್ಥಿತಿಗತಿ ಗಳನ್ನು ಕಂಡು ಕೊಂಡವರು. ಕಾನ್ವೆಂಟ್ಗಳಲ್ಲಿ, ಬೋರ್ಡಿಂಗ್ ಸ್ಕೂಲ್ಗಳಲ್ಲಿ ಓದಿದ ಮಕ್ಕಳು ಸಮಾಜದ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಳ್ಳುವುದಿಲ್ಲ. ಅವರು ಉತ್ತಮ ಅಂಕಗಳಿಸಿಬಿಟ್ಟರೆ ಐಟಿ ಬಿಟಿ ಕಂಪನಿಗಳು ಕಾದಿರುತ್ತವೆ. ಆದರೆ ಗ್ರಾಮೀಣ ಪ್ರದೇಶದ ಮಕ್ಕಳು ನಡೆಯುವ ಹಾದಿಯೇ ಬೇರೆಯದ್ದಾಗಿರುತ್ತದೆ. ಅವರು ಅವರ ಪ್ರಪಂಚದಲ್ಲೇ ಉಳಿದು ಬಿಡುತ್ತಾರೆ. ಗ್ರಾಮೀಣದವರಿಂದಲೇ ಸುಭಿಕ್ಷ ಸಮಾಜ ನಿರ್ಮಾಣ ಸಾಧ್ಯ ಎಂದರು.ಜಿಪಂ ಅಧ್ಯಕ್ಷ ಸಿ.ಪಿ.ರಾಜೇಶ್, ತಾಪಂ ಅಧ್ಯಕ್ಷ ಹರೂರು ರಾಜಣ್ಣ, ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಿದ್ದ ರಾಜೇಗೌಡ, ಹಳೆಯ ವಿದ್ಯಾರ್ಥಿ ಗಳ ಸಂಘದ ಉಪಾಧ್ಯಕ್ಷ ಸಿದ್ದಪ್ಪ ಗೌಡ, ಸಿನಿಮಾ ನಿರ್ದೇಶಕ ಮಂಜು ಮಿತ್ರ, ಪ್ರೊ ರ.ರಮೇಶ್ಕುಮಾರ್ ಉಪಸ್ಥಿತರಿದ್ದರು.
► Follow us on – Facebook / Twitter / Google+