ಗ್ರಾಹಕರ ಹಿತಾಸಕ್ತಿ ಕಾಪಾಡುವಂತೆ ಒತ್ತಾಯ

15

ಇಳಕಲ್,ಸೆ.28- ಬ್ಯಾಂಕಿನ ಶೇರುದಾರ ಸದಸ್ಯರ ಮತ್ತು ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಬ್ಯಾಂಕಿನ ನಿರ್ಧೇಶಕ ಮಂಡಳಿ ಮತ್ತು ನೌಕರ ವರ್ಗ ಬ್ಯಾಂಕಿನ ಆರ್ಥಿಕ ಪ್ರಗತಿಗೆ ಮೂಲಕಾರಣರಾಗಿದ್ದಾರೆ ಎಂದು ಇಳಕಲ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ 51 ನೇ ವರ್ಷದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಚರ್ಚಿಸಲಾಯಿತ್ತು.ಬ್ಯಾಂಕಿನ 51ನೇ ವರ್ಷದ ಸಭೆಯು ಬ್ಯಾಂಕಿನ ಎ.ಪಿ.ಎಮ್.ಸಿ. ಯಾರ್ಡ್ ಆವರಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸದಸ್ಯರು ಎ.ಟಿ.ಎಮ್. ಪ್ರಾರಂಭಿಸುತ್ತೇವೆ ಎಂದು ಹೇಳಿದರು ಇನ್ನೂ ಯಾಕೆ ಪ್ರಾರಂಭಿಸಿಲ್ಲ ಎಂದು ಪ್ರಶ್ನಿಸಿದರು.

ಅದಕ್ಕೆ ಬ್ಯಾಂಕಿನ ಅಧ್ಯಕ್ಷ ಎಲ್.ಬಿ. ಅರಸಿದ್ದಿ ಅವರು ಈ ಕಾರ್ಯವು ಪ್ರಗತಿಯಲ್ಲಿ ಇದೆ. ಇನ್ನು ಒಂದು ತಿಂಗಳೊಗಾಗಿ ಪ್ರಾರಂಭಿಸುತ್ತೇವೆ ಎಂದು ಉತ್ತರಿಸಿದರು.
ನೂತನವಾಗಿ ನೌಕರಿಗೆ ತೆಗೆದುಕೊಂಡ ನೌಕರರಿಗೆ ಸರಿಯಾಗಿ ಅಂಕಿ ಗಳನ್ನು ಮತ್ತು ಅಕ್ಷರಗಳನ್ನು ಬರೆಯಲು ಬರುವದಿಲ್ಲ. ಸಾಮಾನ್ಯ ಜ್ಞಾನವು ಇರುವುದಿಲ್ಲ ಎಂದು ಸದಸ್ಯ ಗುರುದತ್ತ ಗುಳೇದ ಹೇಳಿದಾಗ ನೂತನವಾಗಿ ಸೇರಿದ ನೌಕರರಿಗೆ ತರಬೇತಿಯನ್ನು ಕೊಡಿಸುವದಾಗಿ ಅಧ್ಯಕ್ಷರು ಹೇಳಿದರು.ಬ್ಯಾಂಕಿನ  ಮತ್ತು ಸಂಬಂಧಿಕರ ಸಾಲ ಒಂದು ಕೋಟಿ ಗಿಂತಲೂ ಅಧಿಕ ಇತ್ತು. ಅದು ಇಂದು 30ಲಕ್ಷಕ್ಕೆ ಬಂದಿದೆ. ಮಹಿಳೆಯರಿಗಾಗಿ ಪ್ರತ್ಯಕ ಮಹಿಳಾ ಬ್ಯಾಂಕನ್ನು ಪ್ರಾರಂಭಿಸುವಂತೆ ಸದಸ್ಯರು ವಿನಂತಿಸಿ ಕೊಂಡರು. ಸದಸ್ಯರ ಮಕ್ಕಳ ಉನ್ನತ ಶಿಕ್ಷಣಕ್ಕೆ ಇಬ್ಬರಿಗೆ 10 ಸಾವಿರ ರೂ. ದಂತೆ  ಧನವನ್ನು ನೀಡಲಾಗುವದು ಎಂದರು.

ಬ್ಯಾಂಕಿನ ಮಾರ್ಟಗೇಜ್ ಸಾಲದ ಮಿತಿ 25 ಸಾವಿರವಿದ್ದು ಅದನ್ನು ಒಂದು ಲಕ್ಷ ರೂ.ವರೆಗೆ ನೀಡುವಂತೆ ಸದಸ್ಯರು ಕೇಳಿಕೊಂಡಾಗ 25 ಸಾವಿರ ದಿಂದ 50 ಸಾವಿರಕ್ಕೆ ಹೆಚ್ಚಿಸಲಾಗಿದೆ. ಮೃತ ಸದಸ್ಯರ ಕುಟುಂಬದವರಿಗೆ ಮೂರು ಸಾವಿರ ನೀಡಲಾಗುವದು ಎಂದರು.ಉಳಿತಾಯ ಖಾತೆಯ (ಎಸ್.ಬಿ) ಮೇಲೆ ನಮ್ಮ ಬ್ಯಾಂಕು ಕೇವಲ ಪ್ರತಿ ಶತ 4ರಷ್ಟು ಬಡ್ಡಿಯನ್ನು ನೀಡುತ್ತಿದೆ. ಅದೇ ರಾಷ್ಟ್ರೀಕೃತ ಬ್ಯಾಂಕುಗಳು 5ರಿಂದ 6 ಪ್ರತಿಶತ ಬಡ್ಡಿ ನೀಡುತ್ತಿವೆ ನೀವು ಏಕೆ ನೀಡುತ್ತೀಲ್ಲ ಎಂದು ಸದಸ್ಯ ಟಿ.ಎಚ್ ಕುಲಕರ್ಣಿ ದಾಖಲೆ ಸಮೇತ ಕೇಳಿದ ಪ್ರಶ್ನೆಗೆ ಬ್ಯಾಂಕ ಅಧ್ಯಕ್ಷ ಅರಸಿದ್ದಿ ಅವರು ಎಲ್ಲಾ ರಾಷ್ಟ್ರೀಕೃತ ಬ್ಯಾಂಕಗಳಿಂದ ವಿವರನ್ನು ತರಿಸಿಕೊಂಡು ಹೆಚ್ಚಿಸುವ ಭರವಸೆ ನೀಡದರು.

ಬ್ಯಾಂಕ್ ತನ್ನ 50ನೇ ವರ್ಷದ ಸುವರ್ಣ ಮಹೋತ್ಸವನ್ನು ಸಡಗರ ಸಂಭ್ರ್ರಮಗಳೊಂದಿಗೆ ವಿಜ್ರಂಭಣೆಯಿಂದ ಆಚರಿಸಿದೆ. ಆದರೆ ಕೆಲವು ಪ್ರಭಾವಿ ನಾಯಕರ ಹೆಸರುಗಳನ್ನು ಹಾಕಿ ಅವರ ಬರುವಿಕೆಗಾಗಿ ಲಕ್ಷಾಂತರ ರೂ. ವೆಚ್ಚಮಾಡಿದ್ದೀರಿ. ಅವರು ಬಾರದೇ ನಿರಾಶೆಯನ್ನು ಮಾಡಿದಿರಿ. ಇನ್ನೂಮುಂದೆ ರಾಜಕಾರಣಿಗಳನ್ನು ಕರೆಸುವುದು ಬೇಡ ಎಂದು ಸದಸ್ಯ ನ್ಯಾಯವಾದಿ ಪಾಟೀಲ ಸಭೈಗೆ ಹೇಳಿದರು.ಬ್ಯಾಂಕಿನ ಅಧ್ಯಕ್ಷ ಎಲ್.ಬಿ. ಅರಸಿದ್ದಿ ಸಭೈಯ ಅಧ್ಯಕ್ಷತೆ ವಹಿಸಿದ್ದರು ಉಪಾಧ್ಯಕ್ಷ ಮಂಜುನಾಥ ಶೆಟ್ಟರ, ನಿರ್ಧೇಶಕರಾದ ಎಲ್.ಎನ್. ಗುರಂ, ಗೌತಮ ಬೋರಾ, ಮಹಾಂತೇಶ ಅಂಗಡಿ, ವಿಜಯ ಗಿರಡ್ಡಿ, ಮಲ್ಲಕಾರ್ಜುನ ಅಗ್ನಿ, ಅರವಿಂದ ಮಂಗಳೂರ, ಎನ್.ಎಲ್. ಕನ್ನೂರ, ಬಸವರಾಜ ತಾಳಿಕೋಟಿ, ಸತೀಶ ಸಪ್ಪರದ, ಲಲಿತಾಬಾಯಿ ಸಪ್ಪರದ, ಡಾ|| ಅರುಣಾ ಕೆ. ಅಕ್ಕಿ. ಬ್ಯಾಂಕಿಗೆ ನೂತನ ನಿರ್ಧೇಶಕರೆಂದು ನೇಮಕಗೊಂಡ ಸಿ.ಎ. ಎಂದು ಸಿದ್ದರಾಮಪ್ಪ ಮನ್ನಾಪೂರ ನ್ಯಾಯವಾದಿ ಕೇಶವ ಕಂದಿಕೊಂಡ ಉಪಸ್ಥಿತರಿದ್ದರು.ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ ಶಾಸ್ತ್ರಿ ಸ್ವಾಗತಿಸಿದರು. ಚಂದ್ರ ವಂದಕುದರಿ ವಂದಿಸಿದರು. ಎ.ಪಿ.ಎಂ.ಸಿ ಶಾಖೆಯ ವ್ಯವಸ್ಥಾಪಕ ಡಿ.ಎಚ್. ಭಂಡಾರಿ ನಿರೂಪಿಸಿದರು.

 

► Follow us on –  Facebook / Twitter  / Google+

Sri Raghav

Admin