ಚತುಷ್ಪಥ ರಾಷ್ಟ್ರೀಯ ಹೆದ್ದಾರಿಗೆ ಸರ್ವೆ ಕಾರ್ಯ

Spread the love

kollegala--road

ಕೊಳ್ಳೇಗಾಲ,ಆ.18- ಪಟ್ಟಣ ವ್ಯಾಪ್ತಿಯ ಹೊಸ ಅಣಗಳ್ಳಿ- ಮುಡಿಗುಂಡದವರೆಗೆ 32.76 ಕೋಟಿ ರೂ. ವೆಚ್ಚದಲ್ಲಿ 6.34 ಕಿ.ಮೀ ರಾಷ್ಟ್ರಿಯ ಹೆದ್ದಾರಿ 209ನ್ನು 4 ಪಥದ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಪಟ್ಟಣದಲ್ಲಿ ಸರ್ವೆ ಕಾರ್ಯ ನಡೆಸಿದರು. ಈ ವೇಳೆ ಮಾತನಾಡಿದ ನಗರಸಭಾಯುಕ್ತ ಡಿ.ಕೆ ಲಿಂಗರಾಜು ಪಟ್ಟಣದ ಮಧ್ಯ ಹಾಯ್ದು ಹೋಗುವ ರಾಷ್ಟ್ರಿಯ ಹೆದ್ದಾರಿ 209 ನ್ನು 32.76 ಕೋಟಿ ರೂ. ವೆಚ್ಚದಲ್ಲಿ 4 ಪಥದ ರಸ್ತೆಯಾಗಿ ಅಭಿವೃಧ್ಧಿ ಪಡಿಸಲು ನಿರ್ಧರಿಸಿದ್ದು. ರಸ್ತೆ ಅಗಲಿಕರಣದ ವೇಳೆ ತೆರವುಗೊಳಿಸಲಾಗುವ ಮನೆಗಳ ನಿವಾಸಿಗಳಿಗೆ ನಗರಸಭೆಯಿಂದ ಪರಿಹಾರ ವಿತರಿಸಲಾಗುವುದು ಎಂದರು.
ಇದಕ್ಕಾಗಿ ನಗರೋತ್ತಾನ ಯೋಜನೆಯಡಿ ಬಳಕೆಯಾಗದೆ ಉಳಿದಿರುವ 2.32 ಕೋಟಿ ಹಣವನ್ನು ಮೀಸಲಿರಿಸಿರುವುದಾಗಿ ತಿಳಿಸಿದ ಅವರು ಹೊಸಅಣಗಳ್ಳಿಯಿಂದ ಪ್ರಾರಂಭವಾಗಿ ಆಸ್ಪತ್ರೆ ವೃತ್ತ, ಐ.ಬಿ ವೃತ್ತ ಮಾರ್ಗವಾಗಿ ಮುಡಿಗುಂಡದ ಬಳಿ ಕೊನೆಗೊಳ್ಳುವುದು. ಈ ರಸ್ತೆಯ ಎರಡು ಬದಿಗಳಲ್ಲಿ ಬರುವ ಆಸ್ತಿಯ ಮಾಲಿಕರು ತಮ್ಮ ಆಸ್ತಿಗಳಿಗೆ ಸಂಬಂಧಿಸಿದಂತೆ ಪರಿಹಾರ ಪಡೆಯಲು ಇಚ್ಚಿಸಿದಲ್ಲಿ 7 ದಿನಗಳೊಳಗೆ ಸೂಕ್ತ ದಾಖಲಾತಿಗಳನ್ನು ನಗರ ಸಭೆಗೆ ಸಲ್ಲಿಸುವಂತೆ ಹಾಗೂ ಈ ಪ್ರಕಟಣೆ ಹೊರಡಿಸಿ 15 ದಿನಗಳೊಳಗೆ ರಸ್ತೆ ತೆರವುಗೊಳಿಸಿ ರಸ್ತೆ ಅಭಿವೃದ್ಧಿಗೆ ಸಹಕರಿಸುವಂತೆ ಕೋರಿದರು.ಕಿರಿಯ ಅಭಿಯಂತರ ನಾಗೇಶ್‍ರವರ ತಂಡಕ್ಕೆ ಸರ್ವೆ ಕಾರ್ಯ ನಡೆಸುವಾಗ ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು.

 

► Follow us on –  Facebook / Twitter  / Google+

Facebook Comments

Sri Raghav

Admin