ಚನ್ನಪಟ್ಟಣ ಬಸ್ ನಿಲ್ದಾಣದ ಅವ್ಯವಸ್ಥೆ ಕೇಳೋರಿಲ್ಲ
ಚನ್ನಪಟ್ಟಣ, ಅ.18- ನಗರದ ಕೆಎಸ್ಆರ್ಟಿಸಿ ನಿಲ್ದಾಣದಲ್ಲಿನ ಶೌಚಾಲಯಕ್ಕೆ ಬೀಗ ಜಡಿದಿರುವುದರಿಂದ ನಿಲ್ದಾಣದ ಪ್ರಯಾಣಿಕರಿಗೆ ಭಾರೀ ತೊಂದರೆಯಾಗಿದ್ದು ನಿತ್ಯಕರ್ಮಗಳಿಗೆ ರಸ್ತೆಬದಿಗಳನ್ನು ಆಶ್ರಯಿಸುವ ಸ್ಥಿತಿ ಉಂಟಾಗಿದೆ. ಕೋಟ್ಯಾಂತರ ರೂ. ವೆಚ್ಚದ ಕೆಎಸ್ಆರ್ಟಿಸಿ ನಿಲ್ದಾಣ ನಿಜಕ್ಕೂ ಅವ್ಯವಸ್ಥೆಯ ಆಗರವಾಗಿದ್ದು, ನಿಲ್ದಾಣದ ಎರಡೂ ಕಡೆ ನಿರ್ಮಾಣವಾಗಿರುವ ಶೌಚಾಲಯಗಳಲ್ಲಿ ಒಂದು ಶೌಚಾಲಯ ಬಂದ್ ಅಗಿದೆ.
ಕಳೆದ ನಾಲ್ಕು ದಿನಗಳಿಂದಲೂ ನಿಲ್ದಾಣದ ಒಂದು ಕಡೆಯ ಶೌಚಾಲಯ ಬಂದ್ ಆಗಿರುವುದಕ್ಕೆ ಶೌಚಾಲಯ ದಿಂದ ತೆರಳುವ ಹೊಲಸು ನೀರಿನ ಕೊಳವೆಗಳು ಜಮ್ ಆಗಿರುವುದರಿಂದ ಶೌಚಾಲಯದ ನೀರು ನಿಂತಲ್ಲೇ ನಿಂತಿದೆ ಎಂದು ಅಧಿಕಾರಿಗಳು ಬೇಜವಾಬ್ದಾರಿಯ ಉತ್ತರ ನೀಡುತ್ತಿದ್ದಾರೆ.
ಇಷ್ಟೆಲ್ಲ ಸಮಸ್ಯೆ ಇದ್ದರೂ ಸಾರಿಗೆ ಸಂಸ್ಥೆಯ ಡಿ.ಸಿ. ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿ ತಿಂಗಳು ಲಕ್ಷಾಂತರರೂ. ಬಾಡಿಗೆಯನ್ನು ಪಡೆಯುವ ಸಂಸ್ಥೆಯ ಅಧಿಕಾರಿಗಳು ಬಂದು ಅಂಗಡಿಯಲ್ಲಿ ಬಾಡಿಗೆ ಹಣ ನೀಡುವುದು ತಡ ವಾದರೆ ನೋಟಿಸ್ ಜರಿ ಮಾಡಿ ಕ್ರಮ ತೆಗೆದುಕೊಳ್ಳುವಂತೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಬಂದು ಹೋಗುವ ಪ್ರಯಾಣಿಕರನ್ನು ಹೊಂದಿರುವ ನಿಲ್ದಾಣದ ಮೂಲಭೂತ ಸೌಕರ್ಯ ಗಳನ್ನು ನೀಡುವಲ್ಲಿ ಅಧಿಕಾರಿಗಳು ಸಂಪೂರ್ಣ ವಿಫಲರಾಗಿ ದ್ದಾರೆ.ಕತ್ತಲೆಯಲ್ಲಿ ನಿಲ್ದಾಣ ಉಚಿತ ಲಾಡ್ಜ್: ರಾತ್ರಿಯ ಸಮಯದಲ್ಲಿ ನಿಲ್ದಾಣದಲ್ಲಿನ ಅವರಣದ ಯಾವುದೇ ವಿದ್ಯುತ್ ದೀಪಗಳು ಚಾಲನೆಯಾಗದಿರುವುದರಿಂದ ಸಂಪೂರ್ಣವಾಗಿ ಕತ್ತಲೆ ಆವರಿಸುವುದರಿಂದ ಕೆಲವರಿಗೆ ಕಾಮತೃಷೆ ತೀರಿಸಿಕೊಳ್ಳಲು ಉಚಿತ ಲಾಡ್ಜ್ ಆಗಿ ಪರಿವರ್ತನೆಯಾಗಿದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ.
► Follow us on – Facebook / Twitter / Google+