ಚೆನ್ನೈ ‘ಸೂಪರ್ ಕಿಂಗ್ಸ್’ ಎದುರು ಸೋಲೊಪ್ಪಿಕೊಂಡ ರಾಯಲ್ ಚಾಲೆಂಜರ್ಸ್

Rayudu

ಬೆಂಗಳೂರು. ಏ.25 : ಆರ್ಸಿಬಿ ಮತ್ತು ಸಿಎಸ್ ಕೆ ನಡುವೆ ಇಲ್ಲಿ ನಡೆದ ಐಪಿಎಲ್ ಲೀಗ್ ನ 24ನೇ ಪಂದ್ಯದಲ್ಲಿ ಚೆನ್ನೈ 5 ವಿಕೆಟ್ ಗಳ ಭರ್ಜರಿ ಜಯಗಳಿಸಿದೆ. ರೊಚ್ಚಿಗೆದ್ದ ರಾಯುಡು ಅಬ್ಬರದ ಆಟ ಮತ್ತು ನಾಯಕ ಧೋನಿಯ ಜವಾಬ್ದಾರಿಯುತ ಆಟದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನ ಕೇಕೆ ಹಾಕಿದೆ. ಬೆಂಗಳೂರಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡಿ. ಕಾಕ್ (53) ಮತ್ತು ಡಿವಿಲಿಯರ್ಸ್(68) ಭರ್ಜರಿ ಆಟದ ನೆರವಿನಿಂದ ಸಿಎಸ್’ಕೆ ಗೆ 206 ರನ್ ಗಳ ಬೃಹತ್ ಮೊತ್ತದ ಟಾರ್ಗೆಟ್ ನೀಡಿತ್ತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ ಆರಂಭದಲ್ಲಿ ವಿಕೆಟ್ ಕಳೆದುಕೊಂಡು ಹಿನ್ನಡೆಯನ್ನನುಭವಿಸಿತು ನಂತರ ಬಂದ ರಾಯುಡು ನಾಯಕ ಧೋನಿ ಜೊತೆ ಸೇರಿ ಆರ್ಸಿಬಿ ಬೌಲರ್ ಗಳನ್ನೂ ಮನಬಂದಂತ ಚಚ್ಚಿದರು. ಅದ್ಭುತ ಆಟವಾಡಿದ ರಾಯುಡು 82 ರನ್ ಗಳಿಸಿದರೆ, ನಾಯಕ ಧೋನಿ 70 ರನ್ ಗಳಿಸಿದರು.  ಚೆನ್ನೈ ಪರ ಶಾರ್ದೂಲ್ ಠಾಕೂರ್(2-46), ಇಮ್ರಾನ್ ತಾಹಿರ್(2-35) ಹಾಗೂ ಡ್ವೇಯ್ನಾ ಬ್ರಾವೊ(2-33) ತಲಾ ಎರಡು ವಿಕೆಟ್ ಪಡೆದು ಮಿಂಚಿದರು.

ಈ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಆರ್ಸಿಬಿ ಪರ ಡಿಕಾಕ್(53,37 ಎಸೆತ, 1 ಬೌಂಡರಿ, 4 ಸಿಕ್ಸರ್) ಹಾಗೂ ಡಿವಿಲಿಯರ್ಸ್(68,30 ಎಸೆತ,2 ಬೌಂಡರಿ, 8 ಸಿಕ್ಸರ್), ನಾಯಕ ಕೊಹ್ಲಿ 18, ಮನ್‌ದೀಪ್ ಸಿಂಗ್ 32 ಹಾಗೂ ಗ್ರಾಂಡ್‌ಹೋಮ್11ರನ್ ಗಳಿಸಿದರು.
ಸಂಕ್ಷಿಪ್ತ ಸ್ಕೋರ್ :
ಚನ್ನೈ ಸೂಪರ್ ಕಿಂಗ್ಸ್ : 205/8
ರಾಯಲ್ ಚಾಲೆಂಜರ್ಸ್ ಬೆಂಗಳೂರು : 207/5 (19.4/20 ov, target 206)

Rayudu-2

Deviliars

Sri Raghav

Admin