ಚರಂಡಿಯಲ್ಲಿ ನವಜಾತ ಶಿಶು ಪತ್ತೆ
ಉಗಾರ ಖುರ್ದ,ಸೆ.10- ನವಜಾತ ಹೆಣ್ಣು ಶಿಶು ಸಮೀಪದ ಮೊಳವಾಡ ಗ್ರಾಮದಲ್ಲಿ ನಿನ್ನೆ ಪತ್ತೆಯಾಗಿದೆ. ಗ್ರಾಮಸ್ಥರು ಮಗುವನ್ನು ಚಿಕ್ಕೋಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದೆ. ಗ್ರಾಮದ ಮಹಿಳೆಯೊಬ್ಬರು. ಸಾರ್ವ ಜನಿಕ ಶೌಚಗ್ರೃಹಕ್ಕೆ ಹೋದಾಗ ಪಕ್ಕದ ಚರಂಡಿಯಲ್ಲಿ ಮಗು ಅಳುವುದು ಕೇಳಿದೆ. ಚರಂಡಿಯಲ್ಲಿ ಮಗುವನ್ನು ನೋಡಿದಾಗ ಮಗುವಿನ ಕೈ, ಕಿವಿ ಹಾಗೂ ಮೂಗಿಗೆ ತರಚಿದ ಗಾಯವಾಗಿದ್ದವು. ತಕ್ಷಣ ಗ್ರಾಮಸ್ಥರಿಗೆ ವಿಷಯ ಮುಟ್ಟಿಸಿ ಅಂಬುಲೆನ್ಸ್ಸ್ ಮೂಲಕ ಚಿಕ್ಕೋಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.