ಚರ್ಚಾ ಸ್ಪರ್ಧೆಯಲ್ಲಿ ರೂರಲ್ ಕಾಲೇಜು ಪ್ರಥಮ

6

ಕನಕಪುರ, ಅ.7- ಬೆಂಗಳೂರಿನ ಶ್ರೀ ಶಾರದಾಪದವಿ ಕಾಲೇಜಿನಲ್ಲಿ ಇತ್ತೀಚೆಗೆ ಜರುಗಿದ ರಾಜ್ಯ ಮಟ್ಟದ ಚರ್ಚಾಸ್ಪರ್ಧೆಯಲ್ಲಿ ಕನಕಪುರದ ರೂರಲ್ ಎಜುಕೇಷನ್ ಸೊಸೈಟಿಯ ಪದವಿ ಕಾಲೇಜು ಪ್ರಥಮ ಪರ್ಯಾಯ ಪಾರಿತೋಷಕವನ್ನು ಪಡೆದುಕೊಂಡಿದೆ. ಕಾಲೇಜು ಪ್ರಾಂಶುಪಾಲ ಮೇಜರ್ ಮುನಿರಾಜಪ್ಪ ಮಾತನಾಡಿ, ಸಂಸ್ಥೆಯ ಸಂಸ್ಥಾಪಕ ಎಸ್.ಕರಿಯಪ್ಪರವರ ಹೆಸರಿನಲ್ಲಿ ನಾವೂಕೂಡ ಪ್ರತಿವರ್ಷ ರಾಜ್ಯಮಟ್ಟದ ಚರ್ಚಾಸ್ಪರ್ಧೆಯನ್ನು ಹಮ್ಮಿಕೊಳ್ಳುತ್ತಲೇ ಬಂದಿದ್ದೇವೆ.

 

ಬೆಂಗಳೂರು ಶ್ರೀ ಶಾರದಾ ಪದವಿ ಕಾಲೇಜಿನಲ್ಲಿ ಜರುಗಿದ ರಾಜ್ಯಮಟ್ಟದ ಸ್ಪರ್ಧೆಯಲ್ಲಿಯೂ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಪರ್ಯಾಯ ಪಾರಿತೋಷಕ ಪಡೆದಿರುವುದು ಶ್ಲಾಘನೀಯವಾಗಿದೆ ಎಂದರು.ಭಾಗಿಯಾದ ಚರ್ಚಾಪಟುಗಳಾದ ದಿವ್ಯಶ್ರೀ ಮತ್ತು ಗೀತಾರವರಿಗೆ ಕಾಲೇಜು ಆಡಳಿತ ಮಂಡಳಿ ಮತ್ತು ಉಪನ್ಯಾಸಕರ ಪರವಾಗಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಚರ್ಚಾಸ್ಪರ್ಧೆಯ ಸಂಚಾಲಯಕರಾದ ಡಾ.ಎಸ್.ವಿ. ಲಕ್ಷ್ಮೀನಾರಾಯಣ ಮತ್ತಿತರರು ಹಾಜರಿದ್ದರು.

 

► Follow us on –  Facebook / Twitter  / Google+

Sri Raghav

Admin