ಚಳಿಗಾಲದಲ್ಲಿ ಸ್ಕಿನ್ ಕೇರ್ ಮಾಡಿಕೊಳ್ಳೋದು ಹೇಗೆ..?

Skin-Care-01

ಪ್ರತಿಯೊಬ್ಬರಿಗೂ ನಾವು ಸುಂದರವಾಗಿ ಕಾಣಬೇಕೆಂಬ ಬಯಕೆ ಇದ್ದೇ ಇರುತ್ತದೆ. ಯಾರು ತಾನೇ ತಮ್ಮ ತ್ವಚೆ ಸುಕ್ಕು ಗಟ್ಟುವುದು ಅಥವಾ ಹಾಳಾಗುವುದನ್ನು ಬಯಸಲು ಸಾಧ್ಯ? ನಮ್ಮ ತ್ವಚೆ ಮೃದುವಾಗಿ, ಆರೋಗ್ಯವಾಗಿ ಮತ್ತು ಆಕರ್ಷಣೀಯವಾಗಿ ಇರಬೇಕೆಂಬುದು ಎಲ್ಲರ ಆಕಾಂಕ್ಷೆ. ಅದರಲ್ಲೂ ಹೆಚ್ಚಾಗಿ ಹೆಣ್ಣು ಮಕ್ಕಳು ತಮ್ಮ ತ್ವಚೆಯ ಬಗ್ಗೆ ಹೆಚ್ಚು ಎಚ್ಚರಿಕೆ ಮತ್ತು ಆಸಕ್ತಿ ಹೊಂದಿರುತ್ತಾರೆ.ಹೇಗೆ ಚಳಿಗಾಲ, ಬೇಸಿಗೆ ಮತ್ತು ಮಳೆಗಾಲಕ್ಕೆ ತಕ್ಕಂತೆ ನಮ್ಮ ಪ್ರಕೃತಿಯಲ್ಲಿ ಬದಲಾವಣೆಗಳು ಅಗುತ್ತವೆಯೋ, ಹಾಗೆಯೇ ನಮ್ಮ ಶರೀರ ಮತ್ತು ಆರೋಗ್ಯದ ಮೇಲೂ ಪರಿಣಾಮವನ್ನು ಬೀರುತ್ತವೆ. ಆದ್ದರಿಂದ ಎಲ್ಲ ಕಾಲದಲ್ಲೂ ನಾವು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಅವಶ್ಯವಾಗಿದ್ದು, ಆ ಋತುವಿಗೆ ಅನುಗುಣವಾಗಿ ನಮ್ಮ ಆಹಾರ ಮತ್ತು ಜೀವನ ಶೈಲಿಯನ್ನು ರೂಢಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.ದೇವರು ನಮಗೆ ನೀಡಿರುವ ರೂಪಕ್ಕೆ ಕನ್ನಡಿಯಂತಿರುವ ತ್ವಚೆಯನ್ನು ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ಬನ್ನಿ ಆಯುರ್ವೇದದಲ್ಲಿ ತ್ವಚೆಯ ರಕ್ಷಣೆಗಾಗಿ ಹೇಳಿರುವ ಚಳಿಗಾಲದ ಸೂತ್ರಗಳನ್ನು ನೋಡೋಣ. ( Eesanje News 24/7 ನ್ಯೂಸ್ ಆ್ಯಪ್ –  Click Here to Download  )

 • > ಆಯುರ್ವೇದದಲ್ಲಿ ಚಳಿಗಾಲವನ್ನು ಹೇಮಂತ ಋತುವೆಂದು ಹೇಳಲಾಗಿದ್ದು, ನವೆಂಬರ್‍ನಿಂದ ಆರಂಭವಾಗಿ ಜನವರಿಯಲ್ಲಿ ಕೊನೆಗೊಳ್ಳುತ್ತದೆ.
 • > ಹಾಲು ಮತ್ತು ಅದರಿಂದ ತಯಾರಿಸಿದ ಪದಾರ್ಥಗಳಾದ ಬೆಣ್ಣೆ, ತುಪ್ಪ ಮುಂತಾದವುಗಳನ್ನು ನಿಮ್ಮ ದಿನ ನಿತ್ಯದ ಆಹಾರದಲ್ಲಿ ಅಳವಡಿಸಿಕೊಳ್ಳಿ.
 • > ಆಯುರ್ವೇದದಲ್ಲಿ ಹೇಳಿರುವಂತೆ, ಸಾಕಷ್ಟು ಪ್ರಮಾಣದಲ್ಲಿ ನೀರನ್ನು (ಬಿಸಿ ನೀರು) ಸೇವಿಸಿ ನಿಮ್ಮ ಶರೀರದ ನೀರಿನಾಂಶವನ್ನು ನಿಯಂತ್ರಣದಲ್ಲಿ ಇಡಬೇಕು.
 • > ಸಿಹಿ, ಹುಳಿ ಮತ್ತು ಉಪ್ಪಿನ ರಸ ಹೊಂದಿರುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಿ. ಖಾರ, ಸಿಹಿ ಮತ್ತು ಒಗರು ರಸವುಳ್ಳ ಆಹಾರ ಪದಾರ್ಥಗಳ ಬಳಕೆಯನ್ನು ಕಡಿಮೆ ಮಾಡಬೇಕು.
 • > ಸಾಧ್ಯವಾದಷ್ಟೂ ತಣ್ಣಗಿನಿ ಪಾನೀಯ ಮತ್ತು ಪದಾರ್ಥಗಳನ್ನು ಸೇವಿಸಬಾರದು.
 • > ಮೊಳಕೆ ಕಾಳು ಮತ್ತು ಶುಷ್ಕ ಫಲಗಳಾದ ಬಾದಾಮಿ ಮತ್ತು ಗೋಡಂಬಿ ಇತ್ಯಾದಿ ಸೇವಿಸಿ.
 • > ಎಂದಿನಂತೆ ಹೆಚ್ಚು ನೀರಿನಾಂಶ ಮತ್ತು ನಾರಿನಂಶವುಳ್ಳ ಹಣ್ಣು ಮತ್ತು ತರಕಾರಿಗಳನ್ನು ಸೇವಿಸಿ. ಅದರಲ್ಲೂ ಹಸಿ ತರಕಾರಿಗಳನ್ನು ಸೇವಿಸುವುದರಿಂದ ತುಂಬಾ ಉಪಯುಕ್ತವಾಗುತ್ತದೆ.
 • > ಜೇನುತುಪ್ಪ, ಹಾಲು, ಕಬ್ಬಿನ ಹಾಲು ಮುಂತಾದವುಗಳನ್ನು ಸೇವಿಸಿ.
 • > ಆಯುರ್ವೇದದ ಪ್ರಕಾರ, ಸ್ನಾನಕ್ಕೆ ಬಿಸಿ ನೀರಿಗಿಂತ ಬೆಚ್ಚಗಿನ ನೀರನ್ನು ಬಳಸುವುದು ಉತ್ತಮ.
 • > ಚಳಿಗಾಲವು ಮುಖ್ಯವಾಗಿ ನಮ್ಮ ತ್ವಚೆಯ ಮೇಲೆ ಪರಿಣಾಮ ಬೀರುವುದರಿಂದ ಆಯುರ್ವೇದದಲ್ಲಿ ಹೇಳಿರುವಂತೆ ದಿನವೂ ತೆಂಗಿನೆಣ್ಣೆ ಅಥವಾ ಎಳ್ಳೆಣ್ಣೆಗಳಿಂದ ಅಭ್ಯಂಗ ಅಥವಾ ಎಣ್ಣೆಯ ಮಾಲಿಶ್ ಮಾಡುವುದು ಉತ್ತಮ. ಇದರಿಂದ ಚರ್ಮ ಒಣಗದಂತೆ, ಒಡೆಯದಂತೆ ತಡೆಗಟ್ಟಬಹುದು.
 • > ಸೋಪುಗಳ ಬದಲು ಕಡಲೆ ಹಿಟ್ಟು ಬಳಸುವುದರಿಂದ ಚರ್ಮದ ಹೊಳಪು ಹೆಚ್ಚಾಗುತ್ತದೆ.
 • > ಚಳಿಗಾಳಿಗೆ ಹೆಚ್ಚಾಗಿ ಚರ್ಮವನ್ನು ಒಡ್ಡದಂತೆ ಎಚ್ಚರ ವಹಿಸಿ.
 • > ಸಾಧ್ಯವಾದಷ್ಟು ಉಣ್ಣೆಯ (ಉಲ್ಲನ್) ಬಟ್ಟೆಗಳನ್ನು ಧರಿಸಿ. ದೇಹ ಬೆಚ್ಚಗಿರುವಂತೆ ನೋಡಿಕೊಳ್ಳಿ.
 • > ದೈನಂದಿನ ವ್ಯಾಯಾಮವನ್ನು ರೂಢಿಸಿಕೊಳ್ಳಿ.
 • > ಯೋಗ, ಪ್ರಾಣಾಯಾಮ ಮತ್ತು ಧ್ಯಾನಗಳಿಂದ ನಿಮ್ಮ ದಿನಚರಿಯನ್ನು ಆರಂಭಿಸಿ.ಆಯುರ್ವೇದದ ಗಿಡಮೂಲಿಕೆಗಳಾದ ಬೆಟ್ಟದ ನೆಲ್ಲಿಕಾಯಿ, ತುಳಸಿ, ಬೇವು, ಅಮೃತಬಳ್ಳಿ ಮತ್ತು ಅಶ್ವಗಂಧ ಮುಂತಾದವುಗಳ ಉಪಯೋಗವನ್ನು ತಿಳಿದುಕೊಂಡು ಅದನ್ನು ಬಳಸಿ.

ಶರದೃತುವಿನಲ್ಲಿ ಆರೋಗ್ಯ ಸೂತ್ರಗಳು

ಶರದೃತು ತನ್ನ ಆಗಮನದ ಹಿಂದೆಯೇ ನಡುಗಿ ಸುವ ಚಳಿಯನ್ನು ಹೊತ್ತು ತಂದಿದೆ. ಚಳಿಗಾಲದಲ್ಲಿ ಹಸಿವು ಹೆಚ್ಚು. ಕಾಲಕಾಲಕ್ಕೆ ಆಹಾರ ಬೇಕೆಬೇಕು. ಹಸಿವನ್ನು ತಡೆಯಲು ಪ್ರಯತ್ನಿಸುವುದು ದೇಹಕ್ಕೆ ಹಾನಿಕಾರಕ. ಇದರಿಂದ ಜಠರಾಗ್ನಿಯು ರಕ್ತ, ಮಾಂಸ, ಧಾತು ಮತ್ತು ರಸಗಳನ್ನು ದಹಿಸಿ ಶರೀರ ಕೃಷವಾಗುವ ಸಾಧ್ಯತೆಯೂ ಇರುತ್ತದೆ. ವಾಯು ಪ್ರಕೋಪ ಹೆಚ್ಚುವ ಸಂಭವವು ಇರುತ್ತದೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ. ಶರದೃತುವಿನಲ್ಲಿ ವಾಯು ಪ್ರಕೋಪ ಮತ್ತು ಕಫ ಸಂಚಯ ಆಗುವುದರಿಂದ ಈ ಸಮಸ್ಯೆಗೆ ಕಾರಣವಾಗುವ ಕಡಲೆ, ಮೊಸರು, ಬಾಳೆಹಣ್ಣಿನಂಥ ಪದಾರ್ಥಗಳನ್ನು ವರ್ಜಿಸಬೇಕು. ಸಿಹಿ, ಆಮ್ಲ ಮತ್ತು ಲವಣಯುಕ್ತ ಆಹಾರ ಸೇವಿಸಬೇಕು. ಈ ಕಾಲದಲ್ಲಿ ಬಿಸಿಯಾದ ಪದಾರ್ಥಗಳನ್ನು ಸೇವಿಸುವುದು ಉತ್ತಮ. ಆದರೆ ಕಾಫಿ-ಚಹಾ ಅಧಿಕ ಸೇವನೆ ಒಳ್ಳೆಯದಲ್ಲ ಎಂದು ಆಯುರ್ವೇದ ಪಂಡಿತರು ವಿವರಿಸುತ್ತಾರೆ.

ಚಳಿಯನ್ನು ಓಡಿಸುವ ಜೊತೆಗೆ ಚರ್ಮ ಆರೋಗ್ಯ ಕಾಪಾಡಿಕೊಳ್ಳಲು ಸಾಸಿವೆ ಎಣ್ಣೆಯನ್ನು ದೇಹಕ್ಕೆ ಹಚ್ಚಿ ಅಂಗಮರ್ದನ ಮಾಡುವುದು ಉತ್ತಮ ಎಂದು ಸಲಹೆ ನೀಡುತ್ತಾರೆ ವೈದ್ಯರು. ದೇಹದ ಉಷ್ಣತೆ ಕಾಪಾಡಿಕೊಳ್ಳಲು ಹೆಚ್ಚು ಕ್ಯಾಲೋರಿಗಳ ಅವಶ್ಯಕತೆ ಇದೆ. ಸಿಹಿ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಲು ಅಡ್ಡಿಯಿಲ್ಲ. ಸೀತಾಫಲ, ಪಪ್ಪಾಯಿ, ಕಿತ್ತಳೆ ಹಣ್ಣುಗಳು ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿ. ಹೂಕೋಸು ಬಳಸಿದರೆ ಕೀಲು ನೋವು ಉಂಟಾಗುವ ಸಾಧ್ಯತೆ ಇದ್ದು, ಚಳಿಗಾಲದ ಮಟ್ಟಿಗೆ ಅದರ ಬಳಕೆ ಅನಪೇಕ್ಷಣೀಯ.

 • > ಶರೀರದಲ್ಲಿ ತೇವಾಂಶ ಕಡಿಮೆ ಆಗುವುದರಿಂದ ಚರ್ಮ ಕೂದಲ ಆರೈಕೆ ಅವಶ್ಯಕ>ನಿತ್ಯ ದೇಹಕ್ಕೆ ಎಣ್ಣೆಯಿಂದ ಮಸಾಜ್ ಮಾಡುವುದು ಅಗತ್ಯ.
 • > ಶೀತಬಾಧೆಗೆ ಕರಿಮೆಣಸು, ತುಳಸಿ, ಜೀರಿಗೆ ಶುಂಠಿ ಕಷಾಯ ಸೇವಿಸಬೇಕು.
 • > ಬಿಸಿ ಹಾಲಿಗೆ ಒಂದು ಚಿಟಿಕೆ ಅರಿಶಿಣ ಪುಡಿ ಸೇರಿಸಿ ಸೇವಿಸಿದರೆ ಶೀತ, ಅಲರ್ಜಿ ದೂರವಾಗುತ್ತದೆ.
 • > ಅಸ್ತಮಾ ರೋಗಿಗಳು ಅಮೃತಬಳ್ಳಿ ಕಷಾಯವನ್ನು ಸೇವಿಸುವುದು ಒಳ್ಳೆಯದು.
 • > ದೇಹದ ಉಷ್ಣಾಂಶವನ್ನು ಸಮ ಸ್ಥಿತಿಯಲ್ಲಿಡಲು ತೆಂಗಿನ ಎಣ್ಣೆ ಸಹಕಾರಿ
 • > ಅತಿ ಹೆಚ್ಚು ತರಕಾರಿಗಳನ್ನು ಸೇವಿಸಬೇಕು. ಸೊಪ್ಪು, ಮೊಳಕೆ ಕಟ್ಟಿದ ಕಾಳುಗಳು ಊಟದಲ್ಲಿರಲಿ. ಎಳನೀರು ಸೇವನೆ ಅಗತ್ಯ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin