ಚಾಮಲಾಪುರದಹುಂಡಿ ಸ್ಮಶಾನ ಅಭಿವೃದ್ಧಿಗೆ 10.50 ಲಕ್ಷ ರೂ. ಬಿಡುಗಡೆ

 

nanjanagudu

ನಂಜನಗೂಡು, ಸೆ.22- ನಗರಸಭಾ ವ್ಯಾಪ್ತಿಯ ಮೂರು ವಾರ್ಡ್‍ನ ನಿವಾಸಿಗಳ ಬಹುದಿನಗಳ ಬೇಡಿಕೆಯಾಗಿದ್ದ ನಗರದ ತೋಟಗಾರಿಕೆ ಇಲಾಖೆಯ ಪಕ್ಕದಲ್ಲಿರುವ ಸುಮಾರು 3.20 ಎಕರೆ ಪ್ರದೇಶದ ವಿಸ್ತ್ರೀರ್ಣದಲ್ಲಿ ಸ್ಮಶಾನಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.  ಹಲವಾರು ವರ್ಷಗಳಿಂದ ಚಾಮಲಾಪುರದಹುಂಡಿ ಎನ್‍ಜಿಓ ಕಾಲೋನಿ ಗ್ರಾಮದ ಜನರಿಗೆ ಸ್ಮಶಾಣದ ಜಾಗವಿದ್ದು ಅದು ಅಭಿವೃದ್ಧಿಯಾಗದೆ ತೀವ್ರ ಸಂಕಷ್ಟದಲ್ಲಿದ್ದಾಗ ಈ ಭಾಗದ ನಗರಸಭಾ ಸದಸ್ಯರುಗಳಾದ 27ನೇ ವಾರ್ಡ್‍ನ ಹಿರಿಯ ಸದಸ್ಯ ನಿಂಗಪ್ಪ, 26ನೇ ವಾರ್ಡ್‍ನ ಇಂದ್ರಾಣಿ ದೇವರಾಜು, 25ನೇ ವಾರ್ಡ್‍ನ ಸಿ.ಎಂ.ಶಂಕರ್‍ರವರುಗಳ ಹಿತಾಶಕ್ತಿಯಿಂದ ನಗರಸಭೆಯಲ್ಲಿ ಒತ್ತಡ ತಂದು ಎಸ್‍ಎಫ್‍ಸಿ ಯೋಜನೆಯಡಿಯಲ್ಲಿ 10.50 ಲಕ್ಷ ರೂ. ಹಣ ಬಿಡುಗಡೆ ಮಾಡಿಸಲಾಯಿತು.
ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಈ ಭಾಗದ ನಗರಸಭಾ ಸದಸ್ಯರು, ತೋಟಗಾರಿಕೆಯ ಪಕ್ಕದಲ್ಲಿರುವ 3.20ಎಕರೆ ಸ್ಮಶಾನದ ಜಾಗದಲ್ಲಿ ಈ ಭಾಗದ ಜನರ ಅನುಕೂಲಕ್ಕಾಗಿ ಶಿಥಿಲವಾಗಿರುವ ಸ್ಮಶಾನವನ್ನು ಅಭಿವೃದ್ಧಿ ಪಡಿಸುತ್ತಿದ್ದು ಸ್ಮಶಾನಕ್ಕೆ ಬರುವ ರಸ್ತೆ 4 ಲಕ್ಷ ರೂ.ನಲ್ಲಿ ಅಭಿವೃದ್ಧಿ ಪಡಿಸುತ್ತಿದ್ದು ಪಕ್ಕದ ದಡದಲ್ಲಿರುವ ಸ್ಮಶಾನದ ಜಾಗದಲ್ಲಿ ಶವಸಂಸ್ಕಾರಕ್ಕಾಗಿ 6.50 ರೂ. ವೆಚ್ಚದಲ್ಲಿ ಶೆಲ್ಟರ್ ರಚಿಸಿ ಈ ಭಾಗದ ಜನರ ಬಹುದಿನದ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದರು. ಗುತ್ತಿಗೆದಾರ ಸುರೇಶ್ ಮಾತನಾಡಿ, ಕೇವಲ 3ತಿಂಗಳ ಒಳಗೆ ನಮಗೆ ವಹಿಸಿರುವ ಜವಾಬ್ದಾರಿಯನ್ನು ಗುಣಮಟ್ಟ ಕಾಪಾಡಿಕೊಂಡು ಅಭಿವೃದ್ಧಿ ಪಡಿಸಲಾಗುವುದು ಎಂದರು. ನಗರಸಭಾ ಇಂಜೀನಿಯರ್‍ಗಳಾದ ಭಗವಾನ್, ಲೋಕೇಶ್, ಪುಟ್ಟಸ್ವಾಮಿ, ಪುರಸಭಾ ಮಾಜಿ ಉಪಾಧ್ಯಕ್ಷ ಸೊಸೈಟಿ ಮಹದೇವು, ಮುಖಂಡರುಗಳಾದ ದ್ವಾರ್‍ಕೀಶ್(ಲಿಂಗಣ್ಣ), ವಿ.ಎ.ಬಸವಣ್ಣ, ಶಿವು, ಮಹದೇವು, ಮಲ್ಲು ಮುಂತಾದವರು ಭಾಗವಹಿಸಿದ್ದರು.

 

► Follow us on –  Facebook / Twitter  / Google+

Sri Raghav

Admin