ಚಾಮುಂಡಿ ಪಡೆ ವಾಹನ ಕಾರ್ಯೋನ್ಮುಖ

Spread the love

NANJANAGUDU

ನಂಜನಗೂಡು, ಅ.20- ಮೈಸೂರು ಜಿಲ್ಲಾ ವರಿಷ್ಠಾಧಿಕಾರಿಗಳ ಆದೇಶದ ಮೇರೆಗೆ ಮಹಿಳೆಯರ, ಹೆಣ್ಣುಮಕ್ಕಳ ಮತ್ತು ವಿದ್ಯಾರ್ಥಿನಿಯರ ರಕ್ಷಣೆಗಾಗಿ ಚಾಮುಂಡಿ ಪಡೆ ಕಾರ್ಯೋನ್ಮುಖವಾಗಿದೆ ಎಂದು ಎಎಸ್‍ಪಿಗಳಾದ ಕಲಾಕೃಷ್ಣಮೂರ್ತಿ ಮತ್ತು ದಿವ್ಯ ಸಾರಾ ಥಾಮಸ್ ತಿಳಿಸಿದರು.ನಗರದಲ್ಲಿ ಹೆಚ್ಚುತ್ತಿರುವ ಮಹಿಳೆಯರ ಮೇಲೆ ದೌರ್ಜನ್ಯ, ಸರಗಳ್ಳತನಗಳು ಮತ್ತು ಕಾಲೇಜು ವಿದ್ಯಾರ್ಥಿನಿಯರಿಗೆ ಚುಡಾಯಿಸುವ ಮತ್ತಿತ್ತರ ಪ್ರಕರಣಗಳನ್ನು ಹತ್ತಿಕ್ಕಲು ಚಾಮುಂಡಿ ಪಡೆ ಎಂಬ ಗಸ್ತು ವಾಹನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇನ್ನು ಮುಂದೆ ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ನಗರದಲ್ಲಿ ಭಯವಿಲ್ಲದೆ ಸಂಚರಿಸಬಹುದೆಂದು ಕಿವಿಮಾತು ಹೇಳಿದರು.

ಖ್ಯಾತ ಕರಾಟೆ ಪಟು ರ್ಯಾಂಬೊ ಕಿರಣ್ ಮಾತನಾಡಿ, ಹೆಣ್ಣುಮಕ್ಕಳ ಸ್ವಯಂ ರಕ್ಷಣೆಯ ಬಗ್ಗೆ ತರಬೇತಿ ಅಗತ್ಯವಾಗಿದ್ದು ಓದುವುದಷ್ಟೆಯಲ್ಲ ಆತ್ಮಸೈರ್ಯದಿಂದ ಸ್ವಯಂರಕ್ಷಣೆಯ ಬಗ್ಗೆ ತಿಳಿದುಕೊಂಡಾಗ ಸಮಾಜದಲ್ಲಿ ಯಾವುದೇ ಭಯ-ಭೀತಿಯಿಲ್ಲದೆ, ಕೆಲಸ-ಕಾರ್ಯಗಳನ್ನು ನಿರ್ವಹಿಸಬಹುದೆಂದರು. ಪ್ರಾಂಶುಪಾಲ ಮುತ್ತುರಾಜು ಮಾತನಾಡಿ, ಪೊಲೀಸ್ ಇಲಾಖೆಯು ಸಹಕಾರ ತತ್ವ, ಜನಪರ ಸ್ನೇಹಿ, ವಿದ್ಯಾರ್ಥಿಗಳ ಸ್ನೇಹವಾಗಿರುವ ಇಲಾಖೆಯಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳಲು ಕೋರಿದರು.ಸಿಪಿಐ ರವಿಕುಮಾರ್, ಎಸ್‍ಐ ಚೇತನ್, ಎಎಸ್‍ಐ ಮಲ್ಲೇಶ್ ಹಾಗೂ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin