ಚಿಕ್ಕಬಳ್ಳಾಪುರ-ಕೋಲಾರದಲ್ಲಿ ಬಿರುಗಾಳಿ ಗುಡುಗು, ಆಲಿಕಲ್ಲು ಸಹಿತ ಮಳೆ

Rain-Kolar

ಚಿಕ್ಕಬಳ್ಳಾಪುರ/ ಕೋಲಾರ, ಮೇ 10-ಅವಿಭಜಿತ ಜಿಲ್ಲೆಯ ವಿವಿಧ ಕಡೆ ಗಳಲ್ಲಿ ನಿನ್ನೆ ಸಂಜೆ ಗುಡುಗು ಸಹಿತ ಬಿರುಗಾಳಿ, ಆಲಿಕಲ್ಲಿನ ಜೋರು ಮಳೆಗೆ ಮರಗಳು ಧರೆಗೆ ಉರುಳಿದ್ದರೆ ಹಲವು ಮನೆಗಳ ಶೀಟ್‍ಗಳು ಗಾಳಿಗೆ ಹಾರಿ ಹೋಗಿವೆ. ದ್ರಾಕ್ಷಿ ಮತ್ತಿತರ ಬೆಳೆ ಸಂಪೂರ್ಣ ನಾಶವಾಗಿದೆ.

ಚಿಕ್ಕಬಳ್ಳಾಪುರ ವರದಿ:

ಮಳೆ ಬಂತೆಂದು ಜನ ಸಂತಸ ಪಟ್ಟರೆ ಬೆಳೆ ನಾಶವಾಗಿದ್ದರಿಂದ ರೈತರು ಕಂಗಾಲಾಗುವಂತಾಗಿದೆ.   ಕಳೆದ ಮೂರು ದಿನಗಳಿಂದ ಈ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು ನಿನ್ನೆ ಸಂಜೆ ಸಹಾ ಮೋಡ ಕವಿದ ವಾತಾವಣರ ಇತ್ತಾದರೂ ಸಣ್ಣಗೆ ಬೀಳಲಾರಂಭಿಸಿದ ಮಳೆ ಪ್ರಾರಂಭವಾಗಿ ನಂತರ ಬಿರುಗಾಳಿ ಸಹಿತ ಮಳೆ ಸುರಿಯಿತು. ಇದರಿಂದಾಗಿ ತಾಲ್ಲೂಕಿನಾದ್ಯಂತ ನಾನಾ ಕಡೆಗಳಲ್ಲಿ ದ್ರಾಕ್ಷಿ, ಟಮೊಟೊ ಹೂವಿನ ಗಿಡಗಳು ನಾಶವಾಗಿವೆ.ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದೆ, ಬಿರುಗಾಳಿ ಸಹಿತ ಮಳೆಯ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿತು. ಯಲುವಹಳ್ಳಿ, ದೊಡ್ಡಮರಳಿ, ಬೀಡಿಗಾನಹಳ್ಳಿ ಈ ಪ್ರದೇಶಗಳ ರಸ್ತೆ ಬದಿಯಲ್ಲಿದ್ದ ಬಹುತೇಕ ಮರಗಳು ನೆಲಕ್ಕುರುಳಿದವು. ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯ ಉಂಟಾಗಿಲ್ಲ. ಇನ್ನು ಮಳೆ ಅಬ್ಬರ ಪ್ರಾರಂಭವಾಗುತ್ತಿದ್ದಂತೆ ವಿದ್ಯುತ್‍ಕಂಬಗಳು ಜೋರಾಗಿ ಅಲುಗಾಡತೊಡಗಿದವು ಸಂಜೆಯಿಂದಲೂ ವಿದ್ಯುತ್‍ನ್ನು ಸ್ಥಗಿತಗೊಳಿಸಲಾಗಿತ್ತು.

ದೊಡ್ಡ ಗಾತ್ರದ ಆಲಿಕಲ್ಲು:

ತಾಲ್ಲೂಕಿನ ಅಗಲಗುರ್ಕಿ ಸಮೀಪದ ತೋಟವೊಂದರ ಮೇಲೆ ಭಾರಿ ಗಾತ್ರದ ಹಿಂದೆಂದೂ ಕಾಣದಂತ 50 ರಿಂದ 60 ಕೆ.ಜಿ. ತೂಕದ ಆಲಿಕಲ್ಲು ಬಿದ್ದಿದ್ದು ತೋಟದ ಬೆಳೆ ನಾಶಗೊಂಡಿದೆ.
ಆಲಿಕಲ್ಲು ಅಗಲಗುರ್ಕಿ ಗ್ರಾಮದ ಮುನಿರಾಜು ಎಂಬುವರಿಗೆ ಸೇರಿದ ಈ ತೋಟದಲ್ಲಿ ದೊಡ್ಡ ಬೀಳಲಾರಂಭಿಸುತ್ತಿದ್ದಂತೆ ನೆರೆಹೊರೆಯ ತೋಟಗಳವರು ಧಾವಿಸಿ ಆಲಿಕಲ್ಲುಗಳನ್ನು ಎತ್ತಿ ಎಸೆಯುತ್ತಿದ್ದದ್ದು ಕಂಡುಬಂತು.

ಪಾಲೀ ಹೌಸ್ ಧ್ವಂಸ :

ಬಿರುಗಾಳಿ ಹಾಗೂ ಆಲಿಕಲ್ಲು ಮಳೆಗೆ ಸಾಲ ಸೋಲ ಮಾಡಿ ನಿರ್ಮಿಸಲಾಗಿದ್ದ ಲಕ್ಷಾಂತರ ರೂಗಳ ಪಾಲಿಹೌಸ್ ಸಂಪೂರ್ಣ ನಾಶಗೊಂಡಿದೆ. ಅಗಲಗುರ್ಕಿ ಗ್ರಾಮದ ರಘು ಎಂಬುವರಿಗೆ ಸೇರಿದ ಪಾಲೀಹೌಸ್ ಹಾಗೂ ದ್ರಾಕ್ಷಿ ತೋಟವೂ ನಾಶಗೊಂಡಿದೆ. ವಾಡಿಕೆಯಂತೆ ಮೇ ವೇಳೆಗೆ 56.1 ಎಂ.ಎಂ. ಮಳೆ ಸುರಿದಿದೆ ಈ ಬಾರಿ 68.6 ಎಂ.ಎಂ. ಮಳೆಯಾಗಿರುವುದಾಗಿ ಮಳೆಮಾಪಕರು ತಿಳಿಸಿದ್ದಾರೆ. ಒಟ್ಟಾರೆಯಾಗಿ ಪ್ರಸ್ತುತ ಸುರಿದ ಮಳೆಗೆ ಒಂದಷ್ಟು ಸಂತಸ ತಂದರೂ ಇನ್ನೊಂದಷ್ಟು ಮಂದಿ ಬೆಳೆದ ಬೆಳೆನಾಶವಾಗಿ ರೈತರು ಕಂಗಾಲಾಗಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin