ಚಿಕ್ಕಮಗಳೂರು ಜಿಲ್ಲೆಯ ಮೊದಲ ಮಹಿಳಾ ಪೊಲೀಸ್ ಠಾಣೆ ಉದ್ಘಾಟಿಸಿ

chikkamangaluru

ಚಿಕ್ಕಮಗಳೂರು,ಫೆ.9-ಹೆಣ್ಣು ಮಕ್ಕಳಿಗೆ ಸಂಬಂಧಪಟ್ಟ ಯಾವುದೇ ಪ್ರಕರಣ ಇದ್ದರೂ ಅದನ್ನು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಬಹುದೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ತಿಳಿಸಿದರು. ಜಿಲ್ಲೆಯ ಮೊದಲ ಮಹಿಳಾ ಪೊಲೀಸ್ ಠಾಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಒಬ್ಬ ಮಹಿಳಾ ಪಿಎಸ್‍ಐ, ಇಬ್ಬರು ಎಎಸ್‍ಐ, ನಾಲ್ವರು ಹೆಡ್‍ಕಾನ್‍ಸ್ಟೆಬಲ್, 11 ಕಾನ್‍ಸ್ಟೆಬಲ್‍ಗಳು ಒಟ್ಟು 18 ಮಂದಿಯನನು ಠಾಣೆಗೆ ನೇಮಿಸಲಾಗಿದೆ. ಇನ್ನೂ ಈ ಠಾಣೆಗೆ ಇಬ್ಬರು ಎಎಸ್‍ಐಗಳು, 6 ಹೆಡ್‍ಕಾನ್‍ಸ್ಟೆಬಲ್, 9 ಕಾನ್‍ಸ್ಟೆಬಲ್‍ಗಳನ್ನು ಠಾಣೆಗೆ ನೇಮಕ ಮಾಡಬೇಕಿದೆ ಎಂದು ತಿಳಿಸಿದರು. ಇನ್ನು ಈ ಠಾಣೆಗೆ ಮಹಿಳಾ ಸರ್ಕಲ್ ಇನ್‍ಸ್ಪೆಕ್ಟರ್ ನೇತೃತ್ವದಲ್ಲಿ ಕಾರ್ಯ ನಿರ್ವಹಿಸಬೇಕೆಂಬುವುದು ಸರ್ಕಾರ ನಿಯಮ. ಆದರೆ ಇನ್ನೂ ನೇಮಕಗೊಂಡಿಲ್ಲ. ಮಹಿಳಾ ಸರ್ಕಲ್ ಇನ್‍ಸ್ಪೆಕ್ಟರ್ ನೇಮಕ ಆಗುವವರೆಗೂ ನಗರದ ವೃತ್ತ ನಿರೀಕ್ಷಕರೇ ಈ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ ಎಂದು ತಿಳಿಸಿದರು.

ಮಹಿಳೆಗೆ ಸಂಬಂಧಪಟ್ಟ ಪ್ರಕರಣದ ಜವಾಬ್ದಾರಿಯನ್ನು ಈ ಠಾಣೆಯೇ ನೋಡಿಕೊಳ್ಳಲಿದೆ. ಎಸ್‍ಪಿ ಕಚೇರಿಗೆ ಬರುವ ದೂರುಗಳನ್ನು ಈ ಠಾಣೆಗೆ ವರ್ಗ ಮಾಡಲಾಗುತ್ತದೆ. ಜಿಲ್ಲೆಯ ಯಾವುದೇ ಭಾಗದಲ್ಲಿ ಹೆಣ್ಣು ಮಕ್ಕಳಿಗೆ ತೊಂದರೆಯಾದರೆ ಮಹಿಳಾ ಠಾಣೆಗೆ ದೂರು ನೀಡಬಹುದಾಗಿದೆ ಎಂದು ತಿಳಿಸಿದರು. ಪೊಲೀಸ್ ವೆಬ್‍ಸೈಟ್ ಬಿಡುಗಡೆ: ಸಾರ್ವಜನಿಕರು ಇಲಾಖೆಯೊಂದಿಗೆ ತ್ವರಿತವಾಗಿ ಕಾರ್ಯ ನಿರ್ವಹಿಸುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಪ್ರತ್ಯೇಕ ವೆಬ್‍ಸೈಟ್, ಫೇಸ್‍ಬುಕ್, ಟ್ವಿಟರ್, ಸಾಮಾಜಿಕ ಜಾಲತಾಣವನ್ನು ಎಸ್‍ಪಿ ಅಣ್ಣಾಮಲೈ ಬಿಡುಗಡೆ ಮಾಡಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಪೊಲೀಸರು ಸಾರ್ವಜನಿಕರೊಂದಿಗೆ ಹತ್ತಿರವಾಗಲು ವೆಬ್‍ಸೈಟ್ ಬಿಡುಗಡೆ ಮಾಡಲಾಗಿದೆ. ಫೇಸ್‍ಬುಕ್‍ನಲ್ಲಿ ಟ್ವೀಟ್ ಮಾಡುವುದರ ಮೂಲಕ ಸದಸ್ಯರಾಗಬಹುದು ಎಂದು ವಿವರಿಸಿದರು.

ಬೆಳಗ್ಗೆ 9ರಿಂದ 10, ಸಂಜೆ 6ರಿಂದ ಜಿಲ್ಲೆಯಲ್ಲಿ ನಡೆಯುವ ಪೊಲೀಸ್ ಇಲಾಖೆಗೆ ಸಂಬಂಧಪಟ್ಟ ಪ್ರಕರಣವನ್ನು ಅಪ್‍ಲೋಡ್ ಮಾಡಲಾಗುವುದು. ಈ ವೆಬ್‍ಸೈಟ್‍ನಲ್ಲಿ ಜಿಪಿಎಸ್ ಅಳವಡಿಸಿದ್ದು , ಮೊಬೈಲ್‍ಗೆ ಡೌನ್‍ಲೋಡ್ ಮಾಡಿಕೊಂಡು ಜಿಲ್ಲೆಯ ಠಾಣೆಗಳನ್ನು ಗುರುತಿಸಬಹುದಾಗಿದೆ. ಸಾರ್ವಜನಿಕರು ಕೂಡ ತಮ್ಮ ದೂರುಗಳನ್ನು ವೆಬ್‍ಸೈಟ್ ಮೂಲಕ ದೂರು ನೀಡಬಹುದಾಗಿದೆ ಎಂದು ತಿಳಿಸಿದರು. ಜಿಲ್ಲೆಯ ಕ್ರಿಕೆಟ್ ಬೆಟ್ಟಿಂಗ್ ದಂಧೆ ಪ್ರಕರಣದ ಆರೋಪಿಗಳ ಬ್ಯಾಂಕ್ ಖಾತೆಗಳ ಬಗ್ಗೆ ಮಾಹಿತಿಯನ್ನು ನೀಡುವಂತೆ ಬ್ಯಾಂಕ್‍ಗಳಿಗೆ ಸೂಚಿಸಿದ್ದೇವೆ. ಇದರಿಂದಾಗಿ ಯಾರ್ಯಾರ ಜೊತೆ ವ್ಯವಹಸಿದ್ದಾರೆ ಎಂಬುದು ತಿಳಿದುಬರಲಿದೆ ಎಂದು ತಿಳಿಸಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಪ್ಪ ನಾಯಕ್, ಡಿವೈಎಸ್ಪಿ ಶೇಖರ್ ಉಸೇನ್ ಮೊದಲಾದವರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin