ಚಿಕ್ಕಮಗಳೂರು ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಮರುಳಸಿದ್ದಪ್ಪ ಆಯ್ಕೆ

Spread the love

ಚಿಕ್ಕಮಗಳೂರು,ಫೆ.5-ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಸಾಹಿತಿ ಮತ್ತು ನಾಟಕಕಾರ ಡಾ.ಕೆ. ಮರುಳಸಿದ್ಧಪ್ಪಅವರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿಣಿ ಸರ್ವಾನುಮತದಿಂದ ಆಯ್ಕೆ ಮಾಡಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕುಂದೂರು ಅಶೋಕ್ ತಿಳಿಸಿದ್ದಾರೆ.ಮೂಲತಃ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಕಾರೇಹಳ್ಳಿಯಲ್ಲಿ ಪ್ರಾಥಮಿಕ ಶಿವನಿಯಲ್ಲಿ ಪ್ರೌಢಶಿಕ್ಷಣ ಪಡೆದು ಇಂದಿಗೂ ಊರಿನ ಹಾಗೂ ಕುಟುಂಬದ ಕಷ್ಟ ಸುಖಃಗಳಲ್ಲಿ ನಂಟನ್ನು ಉಳಿಸಿಕೊಂಡವರಾಗಿದ್ದಾರೆ.ಸುಮಾರು 15 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಇವರು ಆಧುನಿಕ ಕನ್ನಡ ನಾಟಕಗಳು ಸೇರಿದಂತೆ ಗ್ರೀಕ್ ನಾಟಕಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದು, ಇವರ ಸಾಹಿತ್ಯ ಕೃತಿಯಲ್ಲಿ ಷಟ್ಪದಿ, ಪ್ರವಾಸ, ಅನುವಾದ ಸಾಹಿತ್ಯ, ಲಾವಣಿಗಳ ಸಂಪಾದನೆ, ನಾಟಕಗಳು, ಅಭಿನಂದನಾ ಗ್ರಂಥಗಳನ್ನು ಹೊರತಂದಿದ್ದಾರೆ.

ರಂಗಭೂಮಿಗೆ ತಮ್ಮ ಜೀವಮಾನವನ್ನೇ ಸಮರ್ಪಿಸಿ ಉಪೇಕ್ಷೆಗೆ ಒಳಗಾದವರನ್ನು ಗುರುತಿಸಿ ಪ್ರೊತ್ಸಾಹಿಸಿ ಗೌರವಿಸುವುದು ಅವರ ಕನಸಾಗಿತ್ತು, ಇವರ ಗುಣ-ಸ್ವಭಾವ, ವಿದ್ವತ್ತಿನ ಆಳ-ಅಗಲ, ದೂರದರ್ಶಿತ್ವ ಅಪಾರವಾದುದು ಎಂದು ಶ್ಲಾಘಿಸಿದರು. ರಂಗಭೂಮಿಯ ಒಡನಾಟವಿರುವ ಇವರಿಗೆ ಬೆಂಗಳೂರಿನ ಹವ್ಯಾಸಿ ರಂಗಭೂಮಿಯೊಂದಿಗೆ ಸಮುದಾಯ ಪ್ರತಿಮಾ ನಾಟಕರಂಗ, ನಾಟ್ಯಸಂಘ, ಥಿಯೇಟರ್‍ಸೆಂಟರ್‍ಗಳ ಸಂಪರ್ಕ ನಿಕಟವಾಗಿದೆ. ಮೈಸೂರು ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯಗಳಲ್ಲಿ ಪ್ರಾಧ್ಯಾಪಕರಾಗಿ ವಿದ್ಯಾರ್ಥಿಸಮೂಹದಲ್ಲಿ ಒಳ್ಳೆ ಮೇಷ್ಟ್ರು ಎನಿಸಿಕೊಂಡು ತಮದೇ ಶಿಷ್ಟರ ಪಡೆಯನ್ನು ಹೊಂದಿದವರು. ನಾಟಕ ಅಕಾಡೆಮಿಯ ಅಧ್ಯಕ್ಷರಾಗಿಯೂ ಸಮರ್ಥ ಆಡಳಿತ ನೀಡಿದ್ದಾರೆ ಎಂದು ವಿವರಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin