ಚಿತ್ರಕಲಾ ಪರಿಷತ್‍ನಲ್ಲಿ ಕಾಟೇಜ್ ಮೇಳ 

nikhila-suman
ಬೆಂಗಳೂರು,ಜೂ.4- ಭಾರತದ ಕೈಮಗ್ಗ ಮತ್ತು ಕರಕುಶಲ ವಸ್ತುಗಳನ್ನು ಪ್ರೋತ್ಸಾಹಿಸುವ ಪ್ರಯತ್ನದಲ್ಲಿ ಹಾಗೂ ಭಾರತದ ಸಮೃದ್ಧ ಪರಂಪರೆಯನ್ನು ಪ್ರದರ್ಶಿಸುವ ಉದ್ದೇಶದೊಂದಿಗೆ ಎಂ.ಜಿ. ರಸ್ತೆಯಲ್ಲಿ ಪ್ರಮುಖ ಮಳಿಗೆ ಮತ್ತು ಎಚ್‍ಎಸ್‍ಆರ್ ಬಿಡಿಎ ಕಾಂಪ್ಲೆಕ್ಸ್‍ನಲ್ಲಿ ಸ್ಯಾಟಲೈಟ್ ಮಳಿಗೆಯನ್ನು ಹೊಂದಿರುವ ಭಾರತ ಸರ್ಕಾರ ಸ್ವಾಮ್ಯದ ಸೆಂಟ್ರಲ್ ಕಾಟೇಜ್ ಇಂಡಸ್ಟ್ರೀಸ್   ಕಾರ್ಪೊರೇಷನ್ ಆಫ್ ಇಂಡಿಯಾ(ಸಿಸಿಐಸಿಐ) ಕೈಮಗ್ಗ ಮತ್ತು ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟವನ್ನು ಕಾಟೇಜ್ ಮೇಳ ಎಂಬ ಹೆಸರಿನಡಿ ಜೂನ್ 11 ರವರೆಗೆ ಕರ್ನಾಟಕ ಚಿತ್ರಕಲಾ ಪರಿಷತ್‍ನಲ್ಲಿ ಮುಂದುವರೆಯಲಿದೆ.ಸಿನಿಮಾ ನಟಿ ನಿಖಿಲಾ ಸುಮನ್ ಮೇಳವನ್ನು ಉದ್ಘಾಟಿಸಿದ್ದು, ಕಾಶ್ಮೀರದ ಬೆಳ್ಳಿ ಆಭರಣಗಳು, ಅರೆ ಅಮೂಲ್ಯ ಹರಳುಗಳು, ಕರ್ನಾಟಕ ಮತ್ತು ಜೈಪುರದ ಬೆಳ್ಳಿ/ವೈಟ್ ಮೆಟಲ್‍ನ ಆಭರಣಗಳು, ದಿಲ್ಲಿಯ ಢೋಕ್ರಾ ಬ್ರಾಸ್ ಕ್ರಾಫ್ಟ್, ಮಧ್ಯಪ್ರದೇಶ ಬಸ್ತರ್‍ನ ಹಾಗೂ ಜೋಧ್‍ಪುರ್‍ನ ಪೀಠೋಪಕರಣ, ಜೈಪುರದ ಪ್ರತ್ಯೇಕ ಆಭರಣಗಳು, ಬಂಗಾಳದ ಟೆರ್ರಾಕೋಟಾ ಆಭರಣಗಳು, ಓರಿಸ್ಸಾದ ವರ್ಣಚಿತ್ರಗಳು, ಬಿಹಾರದ ಮಧುಬನಿ ವರ್ಣಚಿತ್ರಗಳು, ಲ್ಯಾಂಪ್‍ಗಳು, ತಮಿಳುನಾಡಿನ ಮರ ಕೆತ್ತನೆಗಳು, ಲೋಹದ ಕಲಾಕೃತಿಗಳು, ಮರದ ಕೆತ್ತನೆಗಳು, ಕರ್ನಾಟಕದ ಗಂಧ/ರೋಸ್‍ವುಡ್ ಕೆತ್ತನೆಗಳು, ಆಟಿಕೆಗಳು, ತಂಜಾವೂರು ವರ್ಣಚಿತ್ರಗಳು, ಅಮೃತಶಿಲೆ ವಸ್ತುಗಳು ಪ್ರದರ್ಶನದಲ್ಲಿವೆ.

ಪಶ್ಚಿಮ ಬಂಗಾಳದ ಜಾಮ್‍ದಾನಿ ಸೀರೆಗಳು, ಲಕ್ನೋನ ಕಸೂತಿಯ ಮಹಿಳೆಯರ ಉಡುಪು, ಹತ್ತಿಯ ಸೀರೆಗಳು, ಜೈಪುರ್ ಪ್ರಿಂಟ್ ಡ್ರೆಸ್ ಫ್ಯಾಬ್ರಿಕ್‍ಗಳು,ಕೇರಳದ ಬೆಡ್‍ಶೀಟ್‍ಗಳು, ಕೋಲ್ಕತಾದ ಕಸೂರಿ ಸೀರೆ, ಡ್ರೆಸ್ ಫ್ಯಾಬ್ರಿಕ್‍ಗಳು, ಆಂಧ್ರಪ್ರದೇಶದ ಪೋಚಂಪಲ್ಲಿ ಪ್ರಿಂಟೆಡ್ ಸೀರೆಗಳು ಮತ್ತು ಬೆಡ್‍ಶೀಟ್‍ಗಳು, ಕಾಶ್ಮೀರದ ಪಶ್ಮಿನಾ ಶಾಲ್‍ಗಳು, ಸಿಲ್ಕ್ ಕುರ್ತಾಗಳು, ಜ್ಯಾಕೆಟ್‍ಗಳು, ರೇಷ್ಮೆ ಸ್ಕಾರ್ಫ್‍ಗಳು ಜತೆಗೆ ದಿಲ್ಲಿ ಜೋಧಪುರಗಳ ಮರದ ಪೀಠೋಪಕರಣಗಳು ಮುಂತಾದವು ಇಲ್ಲಿ ಲಭ್ಯವಿರುತ್ತವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin