ಚಿತ್ರದುರ್ಗ ಜಿಲ್ಲೆಯ ಜವಗೊಂಡನಹಳ್ಳಿಯಲ್ಲಿ ಲಘು ಭೂಕಂಪನ

Spread the love

Earthquake--01
ಬೆಂಗಳೂರು, ಏ.2-ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಯ ಕೆಲ ಭಾಗಗಳಲ್ಲಿ ಇಂದು ಬೆಳಗ್ಗೆ ಇಂದು ಬೆಳಗ್ಗೆ 6.43 ನಿಮಿಷಕ್ಕೆ ಭೂಕಂಪನ ಸಂಭವಿಸಿರುವ ವರದಿಯಾಗಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವಗೊಂಡನಹಳ್ಳಿಯ ಪಶ್ಚಿಮ ಭಾಗದಲ್ಲಿ ಭೂಕಂಪನದ ಕೇಂದ್ರ ಸ್ಥಾನ ಪತ್ತೆಯಾಗಿದೆ.
2 ಮ್ಯಾಗ್ನಿಟ್ಯೂಡ್‍ನಷ್ಟು ಭೂಕಂಪನದ ತೀವ್ರತೆ ಭೂಕಂಪ ಮಾಪನದಲ್ಲಿ ದಾಖಲಾಗಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ್‍ರೆಡ್ಡಿ ತಿಳಿಸಿದರು.

Earthquake--02

ಹೊಸದುರ್ಗ, ಹಿರಿಯೂರು, ಚಿಕ್ಕನಾಯಕನಹಳ್ಳಿ ಸೇರಿದಂತೆ ಕೆಲವು ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಲಘು ಕಂಪನವಾದ್ದರಿಂದ ಅನಾಹುತವಾಗುವ ವರದಿಗಳಾಗಿಲ್ಲ ಎಂದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Earthquake--03

Facebook Comments

Sri Raghav

Admin