ಚಿತ್ರರಂಗದಲ್ಲಿ ನನ್ನ ಮಗನಿಗೆ ಉತ್ತಮ ಭವಿಷ್ಯವಿದೆ ಎಂಬ ಭರವಸೆ ಮೂಡಿದೆ : ಕುಮಾರಸ್ವಾಮಿ

Jaguar

ಬೆಂಗಳೂರು, ಅ.9- ನಿರೀಕ್ಷೆಯಂತೆ ಜಾಗ್ವಾರ್ ಚಿತ್ರ ಮೂಡಿಬಂದಿದ್ದು, ನನ್ನ ಮಗನಿಗೆ ಚಿತ್ರರಂಗ ಒಂದು ಒಳ್ಳೆಯ ಭವಿಷ್ಯ ರೂಪಿಸಲಿದೆ ಎಂಬ ಭರವಸೆ ಮೂಡಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ಜಾಗ್ವಾರ್ ಚಿತ್ರ ತಂಡ ಹಾಗೂ ಅಖಿಲ ಕರ್ನಾಟಕ ನಿಖಿಲ್‍ಕುಮಾರ್ ಅಭಿಮಾನಿಗಳ ಸಂಘ ಒಗ್ಗೂಡಿ ಹಮ್ಮಿಕೊಂಡಿದ್ದ ಜಾಥಾಕ್ಕೆ ವರನಟ ಡಾ.ರಾಜ್‍ಕುಮಾರ್ ಅವರ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ ನಂತರ ಚಾಲನೆ ನೀಡಿ ಅವರು ಮಾತನಾಡಿದರು.

HDK-1

ರಾಜ್ಯದೆಲ್ಲೆಡೆ ನಿರೀಕ್ಷೆಯಂತೆ ಚಿತ್ರ ಬಿಡುಗಡೆಗೊಂಡು ಅದ್ಧೂರಿ ಪ್ರದರ್ಶನ ಕಾಣುತ್ತಿದ್ದು, ಜನರಿಂದ ಉತ್ತಮ ಅಭಿಪ್ರಾಯ ಕೇಳಿಬರುತ್ತಿದೆ ಎಂದರು. ಕುಮಾರಸ್ವಾಮಿ ಅವರು ಕಂಡ ಕನಸು ಇಂದು ನನಸಾಗಿದೆ. ಕನ್ನಡ ಚಿತ್ರರಂಗಕ್ಕೆ ಒಬ್ಬ ಪ್ರತಿಭಾವಂತ ಯುವನಟನ ಆಗಮನವಾಗಿದ್ದು, ನಿಖಿಲ್ ಅಭಿನಯನವನ್ನು ಪ್ರೇಕ್ಷಕರು ಮೆಚ್ಚಿ ಕೊಂಡಾಡಿದ್ದಾರೆ. ಚಿತ್ರದಲ್ಲಿ ಆ್ಯಕ್ಷನ್ ಹಾಗೂ ನೃತ್ಯ ಎಲ್ಲದರಲ್ಲೂ ಸೈ ಎನಿಸಿಕೊಂಡಿರುವ ನಿಖಿಲ್ ಮುಂದಿನ ದಿನಗಳಲ್ಲಿ ಸ್ಯಾಂಡಲ್‍ವುಡ್‍ನಲ್ಲೇ ನೆಲೆ ನಿಲ್ಲುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ ಎಂದು ಇದೇ ವೇಳೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದರು.

HDK-2
ಜಾಗ್ವಾರ್ ಚಿತ್ರ ತಂಡ ಹಾಗೂ ಅಖಿಲ ಕರ್ನಾಟಕ ನಿಖಿಲ್‍ಕುಮಾರ್ ಅಭಿಮಾನಿಗಳ ಸಂಘ ಒಗ್ಗೂಡಿ ಹಮ್ಮಿಕೊಂಡಿದ್ದ ಜಾಗ್ವಾರ್ ಜಾಥಾಕ್ಕೆ ಹೆಚ್.ಡಿ. ಕುಮಾರಸ್ವಾಮಿ ಅವರು ವರನಟ ಡಾ.ರಾಜ್‍ಕುಮಾರ್ ಅವರ ಸ್ಮಾರಕಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ನವರಾತ್ರಿ ಉತ್ಸವದಲ್ಲಿ ಬಿಡುಗಡೆಗೊಂಡ ಚಿತ್ರ ಎಲ್ಲರ ಪ್ರೀತಿಯನ್ನು ಪಡೆದು ಮುನ್ನುಗ್ಗುತ್ತಿದೆ. ಚಿತ್ರ ಇನ್ನಷ್ಟು ಯಸ್ಸು ಕಾಣಲಿ ಎಂದು ಅಭಿಮಾನಿಗಳು ಹಾರೈಸಿದರು. ಡಾ.ರಾಜ್‍ಕುಮಾರ್ ಅವರ ಸ್ಮಾರಕದಿಂದ ಹೊರಟ ಜಾಥಾ ಕೆಂಪೇಗೌಡ ರಸ್ತೆಯಲ್ಲಿರುವ ಸಂತೋಷ್ ಚಿತ್ರಮಂದಿರದವರೆಗೂ ಅಭಿಮಾನಿಗಳು ಮತ್ತು ಚಿತ್ರ ತಂಡದೊಂದಿಗೆ ಮುನ್ನಡೆಯಿತು.

► Follow us on –  Facebook / Twitter  / Google+

Sri Raghav

Admin