ಚಿತ್ರರಂಗದ ಎಲ್ಲಾ ದಾಖಲೆ ಮುರಿದ್ದಿದ್ದ ಬಾಹುಬಲಿಯನ್ನೇ ಹಿಂದಿಕ್ಕಲಿದೆಯಂತೆ ರಜನಿಯ 2.0 ಚಿತ್ರ

Bahubali--0011

ನವದೆಹಲಿ. ಜೂ.03 : ಚಿತ್ರರಂಗದ ಎಲ್ಲ ದಾಖಲೆಗಳನ್ನೂ ನುಚ್ಚುನೂರು ಮಾಡಿರುವ ಬಾಹುಬಲಿ-2 ಸಿನಿಮಾದ ದಾಖಲೆಯನ್ನೇ ಸೂಪರ್‍ಸ್ಟಾರ್ ರಜನಿಕಾಂತ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ 2.0 ಧೂಳೀಪಟ ಮಾಡಲಿದೆಯೇ ? ಹೌದು ಎನ್ನುತ್ತದೆ ಒಂದು ಮೂಲ.. ರಜನಿಕಾಂತ್, ಅಕ್ಷಯ್‍ಕುಮಾರ್ ಮತ್ತು ಆಮಿ ಜಾಕ್ಸನ್ ನಟಿಸಿರುವ 2.0 ಸಿನಿಮಾ 15 ಭಾಷೆಗಳಲ್ಲಿ 7,000ಕ್ಕೂ ಹೆಚ್ಚು ಪರದೆಗಳಲ್ಲಿ ತೆರೆಕಾಣಲಿದೆ.ಇದು ಬಾಹುಬಲಿ-2 ಸಿನಿಮಾಗಿಂತಲೂ (6500 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು) 500 ಹೆಚ್ಚು ಥಿಯೇಟರ್‍ನಲ್ಲಿ ಪ್ರದರ್ಶನಗೊಳ್ಳಲಿದ್ದು, ಇದು ವಿಶ್ವದ ಅತಿದೊಡ್ಡ ದಾಖಲೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಭಾರತದ ಚಿತ್ರರಂಗದಲ್ಲಿ ಯಾವ ಚಿತ್ರವೂ ಈವರೆಗೆ 15 ಭಾಷೆಗಳಲ್ಲಿ ಬಿಡುಗಡೆಯಾಗಿಲ್ಲ. ಈ ಸಾಧನೆಯನ್ನು ತಲೈವಾ ರಜನಿ ಸಿನಿಮಾ ನಿರ್ಮಿಸಲಿದೆ.

2.0 ಸಿನಿಮಾ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ದೇಶ-ವಿದೇಶಗಳಲ್ಲಿ ತೀವ್ರ ಕುತೂಹಲ ಕೆರಳಿಸಿದೆ. 2010ರಲ್ಲಿ ತೆರೆಕಂಡ ಬ್ಲಾಕ್‍ಬಸ್ಟರ್ ಎಂದಿರನ್‍ನ ಮುಂದುವರಿದ ಭಾಗವೇ 2.0. ಈ ಚಿತ್ರದಲ್ಲಿ ಕ್ರೋ-ಮ್ಯಾನ್ ಎಂಬ ವಿಲನ್ ಪಾತ್ರದಲ್ಲಿ ಅಕ್ಷಯ್ ಕುಮಾರ್ ನಟಿಸುತ್ತಿರುವುದು ಮತ್ತೊಂದು ವಿಶೇಷ. ವೈಜ್ಞಾನಿಕ ಕಲ್ಪನೆ (ಸೈನ್ಸ್-ಫಿಕ್ಷನ್) ಚಿತ್ರವಾದ ಇದು ಪೋಸ್ಟರ್ ನಿಂದ ಹಿಡಿದು ಮೇಕಿಂಗ್‍ವರೆಗೂ ಭಾರಿ ಸುದ್ದಿ ಮಾಡುತ್ತಿದೆ. ಬಾಹುಬಲಿ-2ಗೆ ಇದು ಸಡ್ಡು ಹೊಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬ ಮಾತುಗಳೂ ಭಾರತೀಯ ಚಿತ್ರರಂಗದಲ್ಲಿ ಕೇಳಿಬರುತ್ತವೆ. ಕ್ರಿಯೇಟಿವ್ ಡೈರೆಕ್ಟರ್ ಖ್ಯಾತಿಯ ಎಸ್.ಶಂಕರ್ ನಿರ್ದೇಶನದ 2.0 ಮುಂದಿನ ವರ್ಷ (2018) ಜನವರಿ 25ರಂದು ಬಿಡುಗಡೆಯಾಗಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin