ಚಿನ್ನದ ಅಂಬಾರಿ ಹೊರುವ ಅರ್ಜುನನಿಗೆ ಮರದ ಅಂಬಾರಿ ತಾಲೀಮು

Spread the love

Mysuru-Dasara--05

ಮೈಸೂರು, ಸೆ.18- ಮೈಸೂರು ದಸರಾದಲ್ಲಿ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಜಂಬೂಸವಾರಿ ಮೆರವಣಿಗೆಯ ಆಕರ್ಷಣೆ ಚಿನ್ನದ ಅಂಬಾರಿ. ಈ ಚಿನ್ನದ ಅಂಬಾರಿ 750 ಕೆಜಿ ತೂಕವಿದ್ದು, ಅಂಬಾರಿ ಹೊರುವ ಅರ್ಜುನನಿಗೆ ಇಂದು ತಾಲೀಮು ನಡೆಸಲಾಯಿತು. ಇಂದು ಬೆಳಗ್ಗೆ ಚಿನ್ನದ ಅಂಬಾರಿಯ ತೂಕವಿರುವ ಮರದ ಅಂಬಾರಿ(ಹೌಡಾ)ಯನ್ನು ದಸರಾ ಆನೆ ಕ್ಯಾಪ್ಟನ್ ಅರ್ಜುನ್‍ನ ಮೇಲೆ ಇರಿಸಿ ತಾಲೀಮು ನಡೆಸಲಾಯಿತು. ಮೈಸೂರು ಅರಮನೆ ಆವರಣದಿಂದ ಬನ್ನಿ ಮಂಟಪದವರೆಗೂ ಅರ್ಜುನ ಹೊತ್ತು ಸಾಗಿದ್ದಾನೆ.

Mysuru-Dasara--02

ಕಳೆದ ಹಲವು ದಿನಗಳಿಂದ ಅರ್ಜುನನಿಗೆ ಮರಳಿನ ಮೂಟೆಯನ್ನು ಹೊರಿಸಿ ತಾಲೀಮು ನಡೆಸಲಾಗುತ್ತಿತ್ತು. ಅವು 300 ಕೆಜಿಯಿಂದ ಆರಂಭಿಸಿ 500-600 ಕೆಜಿ ಹೆಚ್ಚಳ ಮಾಡಲಾಗುತ್ತಿತ್ತು. ಇಂದು ಹೌಡಾವನ್ನು ಹೊರಿಸಿ ತಾಲೀಮು ನಡೆಸಲಾಯಿತು.

Mysuru-Dasara--04

 

Mysuru-Dasara--03

Mysuru-Dasara--01

Sri Raghav

Admin