ಚಿಲಿಯಲ್ಲಿ 7.6 ತೀವ್ರತೆಯ ಭಾರೀ ಭೂಕಂಪ, ಸುನಾಮಿ ಆತಂಕ..!
ಚಿಲಿ, ಡಿ.25 : ಚಿಲಿಯಲ್ಲಿ 7.6 ಪ್ರಮಾಣದ ಭಾರೀ ಭೂಕಂಪ ಸಂಭವಿಸಿದ್ದು ಸುನಾಮಿ ಆತಂಕ ಎದುರಾಗಿದೆ. ದಕ್ಷಿಣ ಚಿಲಿಯ ಕ್ವೆಲ್ಲಾನ್ ಎಂಬಲ್ಲಿಂದ 40 ಕಿ.ಮೀ. ದೂರದಲ್ಲಿ 34 ಕಿ.ಮೀ. ಭೂಮಿಯಾಳದಲ್ಲಿ 7.6 ಪ್ರಮಾಣದ ಭಾರೀ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆ ನೀಡಲಾಗಿದೆ. ದಿ ಪೆಸಿಫಿಕ್ ಸುನಾಮಿ ವಾರ್ನಿಂಗ್ ಸೆಂಟರ್ ಸುನಾಮಿ ಎಚ್ಚರಿಕೆ ನೀಡಿದ್ದು, ಸಾಮಾನ್ಯ ಅಲೆಗಳಿಗಿಂತ 3 ಮೀಟರ್ ಎತ್ತರದ ಅಲೆಗಳು ಏಳಬಹುದು ಎಂದು ಮುನ್ನೆಚ್ಚರಿಕೆ ನೀಡಿದೆ. ಕರಾವಳಿಯಲ್ಲಿರುವ ಜನರಿಗೆ ಸುನಾಮಿಯ ಎಚ್ಚರಿಕೆ ನೀಡಲಾಗಿದ್ದು, ಜನರನ್ನು ಸ್ಥಳಾಂತರಿಸಲಾಗುತ್ತಿದೆ.