ಚೀನಾದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು 40 ಮಂದಿ ಬಲಿ

China-011

ಬೀಜಿಂಗ್, ನ.24-ವಿದ್ಯುತ್ ಸ್ಥಾವರದಲ್ಲಿ ನಿರ್ಮಾಣ ಹಂತದಲ್ಲಿದ್ದ ಅಂಕಣವೊಂದು ಕುಸಿದು 40ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವ ಘಟನೆ ಪೂರ್ವ ಚೀನಾದ ಜಿಯಾಂಗ್‍ಕ್ಷಿ ಪ್ರಾಂತ್ಯದಲ್ಲಿ ಇಂದು ಮುಂಜÁನೆ ಸಂಭವಿಸಿದೆ. ಕೂಲಿಂಗ್ ಟವರ್ ಪ್ಲಾಟ್‍ಫಾರಂ ಇಂದು ಬೆಳಿಗ್ಗೆ 7ರ ಸುಮಾರಿನಲ್ಲಿ ಕುಸಿದುಬಿದ್ದು ಈ ದುರಂತ ಸಂಭವಿಸಿದ್ದು, ಭಗ್ನಾವಶೇಷಗಳ ಅಡಿ ಸಿಲುಕಿರುವವರ ರಕ್ಷಣಾ ಕಾರ್ಯ ಮುಂದುವರಿದಿದೆ ಎಂದು ಸರ್ಕಾರಿ ಒಡೆತನದ ಕ್ಸಿನ್‍ಹುವಾ ವಾರ್ತಾ ಸಂಸ್ಥೆ ಹೇಳಿದೆ.  ಫೆಂಗ್‍ಚೆಂಗ್ ವಿದ್ಯುತ್ ಘಟಕದ ಶೈತ್ಯ ಗೋಪುರದ ವೇದಿಕೆ ಕುಸಿದ ಸಂದರ್ಭದಲ್ಲಿ 68 ಮಂದಿ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಈ ದುರ್ಘಟನೆಯಲ್ಲಿ 40ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ.

ಅವಶೇಷಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ 200ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ಮತ್ತು ರಕ್ಷಣಾ ಶ್ವಾನಗಳನ್ನು ಬಳಸಲಾಗಿದೆ.  ಇದು ಈ ವರ್ಷದ ಅತ್ಯಂತ ದೊಡ್ಡ ಕೈಗಾರಿಕಾ ದುರಂತದಲ್ಲಿ ಒಂದು ಎಂದು ಬಣ್ಣಿಸಲಾಗಿದೆ. ಕಳೆದ ವರ್ಷ ಚೀನಾದ ಬಂದರು ನಗರಿ ಟಿಯಾನ್‍ಜಿನ್‍ನಲ್ಲಿ ಅವಳಿ ಸ್ಫೋಟ ಸಂಭವಿಸಿ ಕನಿಷ್ಠ 173 ಮಂದಿ ಸಾವಿಗೀಡಾಗಿದ್ದರು. 2014ರ ಅಗಸ್ಟ್‍ನಲ್ಲಿ ಚೀನಾದ ಪೂರ್ವ ಭಾಗದ ಕಾರು ಬಿಡಿಭಾಗ ತಯಾರಿಕಾ ಘಟಕದಲ್ಲಿ ಲೋಹ ಧೂಳು ಸ್ಫೋಟದಿಂದ ಕನಿಷ್ಠ 75 ಮಂದಿ ಮೃತಪಟ್ಟಿದ್ದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin