ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿಯಿಂದಲೇ ದಲೈಲಾಮಾಗೆ ದೇಣಿಗೆ…!
ಬೀಜಿಂಗ್, ಮೇ 2-ಗಡಿಪಾರಾದ 81 ವರ್ಷದ ಟಿಬೆಟ್ ಧರ್ಮಗುರು ದಲೈಲಾಮ ಅವರಿಗೆ ಪಕ್ಷದ ಕೆಲವು ಅಧಿಕಾರಿಗಳು ಹಣ, ದೇಣಿಗೆ ನೀಡಿದ್ದಾರೆಂದು ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿ ಸಾರ್ವಜನಿಕವಾಗಿ ಬಹಿರಂಗಪಡಿಸಿದೆ. ಪಕ್ಷದ ಶಿಸ್ತು ತಪಾಸಣಾ ಅಧಿಕಾರಿಯೊಬ್ಬರು ಇದೇ ಮೊದಲ ಬಾರಿಗೆ ಈ ವಿಷಯ ಬಹಿರಂಗಪಡಿಸಿದ್ದು, ಪ್ರತ್ಯೇಕತಾವಾದದ ವಿರುದ್ಧ ಹೋರಾಡುವ ನಾವು ದಲೈಲಾಮಾ ಅವರಿಗೆ ದೇಣಿಗೆ ನೀಡಿರುವುದು ಪಕ್ಷ ತಲೆ ತಗ್ಗಿಸುವಂತಾಗಿದೆ ಎಂದಿದ್ದಾರೆ.
ಪ್ರತ್ಯೇಕತಾವಾದಿಗಳು ಮತ್ತು ಪ್ರತ್ಯೇಕತಾವಾದವನ್ನು ಖಂಡಿಸುವ ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿಯು ದಲೈಲಾಮಾಗೆ ದೇಣಿಗೆ ನೀಡಿರುವುದು ಖಂಡನೀಯ. ಪಕ್ಷದ ಕೆಲವರು ಈ ರೀತಿ ವರ್ತಿಸುತ್ತಿರುವುದರಿಂದ ಪಕ್ಷದ ತತ್ವ-ಸಿದ್ಧಾಂತಗಳಿಗೆ ಧಕ್ಕೆ ಉಂಟುಮಾಡುವಂತಾಗಿದೆ ಎಂದು ಪಕ್ಷ ವಿಷಾದಿಸಿದೆ.
< Eesanje News 24/7 ನ್ಯೂಸ್ ಆ್ಯಪ್ >