ಚೆನ್ನಮ್ಮಾ ಸಮಾಧಿ ರಾಷ್ಟ್ರೀಯ ಸ್ಮಾರಕವಾಗಲಿ

CINNAMMA

ಬೈಲಹೊಂಗಲ,ಸೆ.1- ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಮಹಿಳೆ ರಾಣಿಕಿತ್ತೂರುಚೆನ್ನಮ್ಮಸಮಾಧಿರಾಷ್ಟ್ರೀಯ ಸ್ಮಾರಕವಾಗಬೇಕೆಂದುಕನ್ನಡ ಸಾಹಿತ್ಯ ಪರಿಷತ್ತಿನಧಾರವಾಡಜಿಲ್ಲಾಘಟಕದಗೌರವ ಕಾರ್ಯದರ್ಶಿ ಪ್ರೊ .ಕೆ.ಎಸ್.ಕೌಜಲಗಿ ಹೇಳಿದರು.  ಅವರುನಿನ್ನೆ ಪಟ್ಟಣದ ವೀರರಾಣಿಕಿತ್ತೂರುಚೆನ್ನಮ್ಮ ಸಮಾಧಿಗೆ ಬೇಟಿ ನೀಡಿಗೌರವ ಸಲ್ಲಿಸಿ ಮಾತನಾಡಿ. ಐತಿಹಾಸಿಕ ಈ ನಾಡಿನಲ್ಲಿ ಅನೇಕಾನೇಕ ಸ್ವಾತಂತ್ರ್ಯ ವೀರಯೋಧರು, ಸಾಧಕರು ಆಗಿ ಹೋಗಿದ್ದುಅದರಲ್ಲಿರಾಣಿ ಚೆನ್ನಮ್ಮಳು ಸಹ ಬ್ರಿಟೀಷರ ವಿರುದ್ದ ಹೋರಾಡಿ ಸ್ರೀಯರಿಗೆ ಮಾದರಿಯಾಗಿದ್ದಾರೆ. ಅಂಥವರ ಸಮಾಧಿ ವಿಶ್ವ ಪ್ರಚಾರ ಪಡೆಯದೇಇರುವದುದುರ್ದೈವವಾಗಿದೆ. ಈ ನಿಟ್ಟಿನಲ್ಲಿರಾಷ್ಟ್ರಪಿತ ಮಹಾತ್ಮಾಗಾಂಧೀಜಿಅವರದೆಹಲಿಯಲ್ಲಿರುವರಾಜಘಾಟ ಮಾದರಿಯಲ್ಲಿಯೆ ಸಮಾಧಿಯನ್ನುಅಭಿವೃದ್ದಿ ಪಡಿಸಿ ರಾಷ್ಟ್ರೀಯ ಸ್ಮಾರಕವಾಗಬೇಕೆಂದುರಾಜ್ಯ ಮತ್ತುಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಕನ್ನಡಜಾನಪದ ಪರಿಷತ್ತಿನಜಿಲ್ಲಾಘಟಕದಅಧ್ಯಕ್ಷ ಮೋಹನ ಗುಂಡ್ಲೂರ ಮಾತನಾಡಿ, ವೀರರಾಣಿಕಿತ್ತೂರುಚೆನ್ನಮ್ಮ ಸಮಾಜದಲ್ಲಿ ಶೌರ್ಯ ಸಾಹಸಕ್ಕೆ ಹೆಸರಾಗಿದ್ದುಇಡೀ ಮನುಕುಲವೆ ಮೆಚ್ಚುವಂತದ್ದಾಗಿದೆ. ಇತಿಹಾಸದ ಪುಟಗಳನ್ನು ತಿರುವಿದಾಗ ನಾಡಿನ ಮಹಿಮೆ ಅಗಾಧವಾಗಿದೆ. ಸಾಧಕರಜೀವನಕ್ರಮ ಬದುಕಿಗೆ ಸ್ಪೂರ್ತಿಯಾಗಲಿದ್ದುಕಿತ್ತೂರುಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಅಮಟೂರು ಬಾಳಪ್ಪ ಮುಂತಾದವರಕುರಿತುದೇಶದ ವಿವಿಧರಾಜ್ಯದ ಪಠ್ಯ ಪುಸ್ತಕಗಳಲ್ಲಿ ಪ್ರಕಟಿಸಲುಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದರು. ಸಮಾಧಿ ಸ್ಥಳ ಅಭಿವೃದ್ದಿ ಪಡಿಸಿ ವಿಶ್ವ ಪ್ರವಾಸಿ ತಾಣವಾಗಲು ಸಂಘ ಸಂಸ್ಥೆಗಳ ಹೋರಾಟವು ಸಹ ಪ್ರಸ್ತುತಅವಶ್ಯವಾಗಿದೆಎಂದರು.

 

ಕೆಎಲ್‍ಇ ಸಂಸ್ಥೆಯ ನಿರ್ದೇಶಕ ಎಸ್.ಸಿ.ಮೆಟಗುಡ್, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿಜಿಲ್ಲಾಧ್ಯಕ್ಷ ಮೋಹನ ಬಸವನಗೌಡ ಪಾಟೀಲ, ಕನ್ನಡಜಾನಪದ ಪರಿಷತ್ತಿನತಾಲೂಕಾಘಟಕದಅಧ್ಯಕ್ಷಚಂದ್ರಶೇಖರಕೊಪ್ಪದ, ಕನ್ನಡಜಾನಪದ ಪರಿಷತ್ತಿನತಾಲೂಕಾಘಟಕದ ವಕ್ತಾರ ಮಹಾಂತೇಶ ರಾಜಗೋಳಿ, ಸಂಗೊಳ್ಳಿ ರಾಯಣ್ಣ ಜನ್ಮಸ್ಥಳದ ಅಭಿವೃದ್ದಿ ಹೋರಾಟ ಸಮಿತಿಯ ಮುಖಂಡ ಮಲ್ಲಿಕಾರ್ಜುನ ಕೊಡೊಳ್ಳಿ, ಹುಬ್ಬಳ್ಳಿ ತಾಲೂಕ ಶರಣ ಸಾಹಿತ್ಯ ಪರಿಷತ್ತಿನಗೌರವಾಧ್ಯಕ್ಷ ಜಿ.ಬಿ.ವೀರಭದ್ರಯ್ಯ, ಕಾರ್ಯದರ್ಶಿ ಪಿ.ಬಿ.ಹಿರೇಮಠ, ಸೋಮೇಶ್ವರ ಸಕ್ಕರೆಕಾರ್ಖಾನೆ ನಿರ್ದೇಶಕ ಶ್ರೀಶೈಲ ಶರಣಪ್ಪನವರ, ಪ್ರವಾಸೋದ್ಯಮಇಲಾಖೆಯ ಪ್ರತಿನಿಧಿ ಬಿ.ಎ.ನಾಯ್ಕರ(ಹುಣಶೀಕಟ್ಟಿ) ಮುಂತಾದವರು ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

 

Sri Raghav

Admin