ಚೆನ್ನೈನಲ್ಲಿರುವ ನಟಿ ಖುಷ್ಬೂ ಮನೆಗೆ ಬಾಂಬ್ ಬೆದರಿಕೆ
ಚೆನ್ನೈ, ಮೇ 8-ಖ್ಯಾತ ನಟಿ ಮತ್ತು ಕಾಂಗ್ರೆಸ್ ವಕ್ತಾರೆ ಖುಷ್ಬೂ ಅವರ ಚೆನ್ನೈನಲ್ಲಿರುವ ಪಟ್ಟಿಣಪ್ಪಾಕತ್ತೆ ಮನೆಗೆ ಬಾಂಬ್ ಇಡಲಾಗಿದೆ ಎಂಬ ಬೆದರಿಕೆ ಹಿನ್ನೆಲೆಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ಸುಳ್ಳು ಸಂದೇಶ ರವಾನಿಸಿದ ಆರೋಪದ ಮೇಲೆ ಉದುಮಲ್ ಪೇಟ್ನ ಮಾರಿ ಅಮ್ಮಾಳ್ನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಖುಷ್ಬೂ, ಅವರ ಪತಿ ಸುಂದರ್ ಮತ್ತು ಮಕ್ಕಳು ವಿದೇಶದಲ್ಲಿ ರಜೆ ಪ್ರವಾಸದಲ್ಲಿದ್ದಾರೆ.
ಮುಂಜಾನೆ ಈ ಬಗ್ಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಬಾಂಬ್ ಬೆದರಿಕೆ ಕರೆ ಬಂದಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಅವರ ಮನೆಯ ಭದ್ರತಾ ನೌಕರರ ಸಹಾಯದಿಂದ ತೀವ್ರ ಶೋಧ ನಡೆಸಿದರು. ಆದರೆ ಬಾಂಬ್ ಪತ್ತೆಯಾಗಲಿಲ್ಲ. ನಂತರ ದೂರವಾಣಿ ಕರೆಯನ್ನು ಆಧರಿಸಿ ಮಾರಿ ಅಮ್ಮಾಳ್ನನ್ನು ಪೊಲೀಸರು ಬಂಧಿಸಿದರು.
< Eesanje News 24/7 ನ್ಯೂಸ್ ಆ್ಯಪ್ >