ಚೆನ್ನೈನಲ್ಲಿ ಅಗ್ನಿ ಆಕಸ್ಮಿಕ, ನಾಲ್ವರ ಸಜೀವ ದಹನ
ಚೆನ್ನೈ, ಮೇ 8- ಅಗ್ನಿ ಆಕಸ್ಮಿಕವೊಂದರಲ್ಲಿ ಮೂವರು ಮಕ್ಕಳು ಸೇರಿದಂತೆ ನಾಲ್ವರು ಸಜೀವ ದಹನಗೊಂಡ ದಾರುಣ ಘಟನೆ ಇಂದು ಬೆಳಗ್ಗೆ ಚೆನ್ನೈ ನಗರದಲ್ಲಿ ಸಂಭವಿಸಿದೆ. ಈ ಘಟನೆಯಲ್ಲಿ 10 ಮಂದಿ ತೀವ್ರ ಗಾಯಗೊಂಡಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ. ಅಗ್ನಿಯ ಕೆನ್ನಾಲಗೆಗೆ 15 ವಾಹನಗಳು ಭಸ್ಮವಾಗಿವೆ. ಚೆನ್ನೈನ ವಡಪಳನಿ ಬಡಾವಣೆಯ ವಸತಿ ಸಂಕೀರ್ಣವೊಂದರ ಪಾರ್ಕಿಂಗ್ ಪ್ರದೇಶದಲ್ಲಿ ಇಂದು ಬೆಳಗ್ಗೆ ಬೆಂಕಿ ದುರಂತ ಸಂಭವಿಸಿ ಕಟ್ಟಡವನ್ನು ಆವರಿಸಿಕೊಂಡಿತು. ಈ ದುರ್ಘಟನೆಯಲ್ಲಿ ಸಂಜಯ್ (5), ಸೆಲ್ವಿ (5), ಶಾಲಿನಿ (10) ಹಾಗೂ ಮೀನಾಕ್ಷಿ (60) ಅವರು ಜೀವಂತ ದಹನಗೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.
ಅಗ್ನಿ ಆಕಸ್ಮಿಕದಲ್ಲಿ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಮೂವರ ಸ್ಥಿತಿ ಶೋಚನೀಯವಾಗಿದೆ. ಬೆಂಕಿಯ ಪ್ರಕೋಪಕ್ಕೆ 15 ವಾಹನಗಳು ಸುಟ್ಟು ಕರಕಲಾಗಿವೆ. ಸುದ್ದಿ ತಿಳಿದ ಕೂಡಲೇ ಅಗ್ನಿಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು. ಶಾರ್ಟ್ ಸಕ್ರ್ಯೂಟ್ನಿಂದ ಈ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS