ಚೆನ್ನೈನಲ್ಲಿ ಮತ್ತೆ ಭೂಕುಸಿತ, ಭಯಭೀತರಾದ ಜನ
ಚೆನ್ನೈ, ಏ.12-ತಮಿಳುನಾಡು ರಾಜಧಾನಿ ಚೆನ್ನೈನ ಅಣ್ಣಾಸಾಲೈ ರಸ್ತೆಯಲ್ಲಿ ಅಮೆರಿಕ ರಾಯಭಾರಿ ಕಚೇರಿ ಬಳಿ ಮೆಟ್ರೋ ಕಾಮಗಾರಿ ವೇಳೆ ನಿನ್ನೆ ಮತ್ತೆ ಭೂಕುಸಿತ ಉಂಟಾಗಿದೆ. ಈ ಘಟನೆಯಿಂದ ವಾಹನ ಸವಾರರು ಮತ್ತು ಸಾರ್ವಜನಿಕರು ಆತಂಕಗೊಂಡಿದ್ದಾರೆ. ಏ.9ರಿಂದ ಈ ರಸ್ತೆಯಲ್ಲಿ ಭೂಕುಸಿತ ಘಟನೆಗಳು ಪುನರಾವರ್ತನೆಯಾಗುತ್ತಿದ್ದು, ಅಂದು ತಮಿಳುನಾಡು ಸರ್ಕಾರಿ ಬಸ್ ಮತ್ತು ಹೋಂಡಾ ಸಿಟಿ ಕಾರು ಮಣ್ಣಿನಲ್ಲಿ ಸಿಲುಕಿದ್ದವು, ಜನರು ಅಪಾಯದಿಂದ ಪಾರಾಗಿದ್ದರು. ಮೆಟ್ರೋ ಕಾಮಗಾರಿ ವೇಳೆ ಕಂಪನದಿಂದ ರಸ್ತೆಯಲ್ಲಿ ಮಣ್ಣು ಸಡಿಲಗೊಂಡು ಇಂಥ ಘಟನೆಗಳು ಸಂಭವಿಸುತ್ತಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >