ಛತ್ತೀಸ್‍ಗಢ : ಕರಡಿ ದಾಳಿಯಲ್ಲಿ ಇಬ್ಬರು ಸಾವು, ಐವರಿಗೆ ಗಾಯ

Bear

ರಾಯ್‍ಪುರ್, ಆ.26-ಛತ್ತೀಸ್‍ಗಢದ ಬುಡಕಟ್ಟು ಪ್ರಾಬಲ್ಯ ಹೊಂದಿರುವ ಕೊರಿಯಾ ಜಿಲ್ಲೆಯ ಬೈಕುಂತ್‍ಪುರ ಅರಣ್ಯ ಪ್ರದೇಶದಲ್ಲಿ ನಿನ್ನೆ ನಡೆದ ಕರಡಿಯೊಂದರ ದಾಳಿಯಲ್ಲಿ ಇಬ್ಬರು ಗ್ರಾಮಸ್ಥರು ಮೃತಪಟ್ಟು, ಮೂವರು ಪೊಲೀಸರೂ ಸೇರಿದಂತೆ ಐವರು ತೀವ್ರ ಗಾಯಗೊಂಡಿದ್ದಾರೆ.ಚಿರ್‍ಮಿರಿ ಪೊಲೀಸ್ ಠಾಣೆ ಸರಹದ್ದಿನ ಗೆಲ್ಹಾಪಾನಿ ಗ್ರಾಮದ ಬಳಿ ಅರಣ್ಯ ಪ್ರದೇಶದಲ್ಲಿ ಈ ಕರಡಿ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಪಟ್ಟವರನ್ನು ಬನ್ಫ್‍ಧರಿ (60) ಮತ್ತು ಸುಶಾಂತ್ ಸಾಹು (36) ಎಂದು ಗುರುತಿಸಲಾಗಿದೆ.
ಪೊದೆಯೊಂದರಲ್ಲಿ ಅಡಗಿದ್ದ ಕರಡಿ ಮೊದಲು ಸುಶಾಂತ್ ಮೇಲೆ ಆಕ್ರಮಣ ನಡೆಸಿ ಅರಣ್ಯದೊಳಗೆ ಎಳೆದೊಯ್ಯಿತು. ಹತ್ತಿರದಲ್ಲಿ ಕುರಿ ಕಾಯುತ್ತಿದ್ದ ಬನ್ಫ್‍ಧರಿ, ಸುಶಾಂತ್ ರಕ್ಷಣೆಗೆ ದಾವಿಸಿದಾಗ ಕರಡಿ ಆತನ ಮೇಲೆ ದಾಳಿ ನಡೆಸಿ ಕಚ್ಚಿ ಸಾಯಿಸಿತು.ಸುದ್ದಿ ತಿಳಿದು ಗ್ರಾಮಸ್ಥರು ಮತ್ತು ಪೊಲೀಸರು ಕರಡಿಯ ಬೆನ್ನಟ್ಟಿದ್ದಾಗ ಅದು ಮತ್ತೆ ದಾಳಿ ನಡೆಸಿ ಐವರನ್ನು ಗಾಯಗೊಳಿಸಿತು.

 

► Follow us on –  Facebook / Twitter  / Google+

Sri Raghav

Admin