ಜನದಟ್ಟಣೆ ನೀಗಿಸಲು ಪೊಲೀಸರ ಕ್ರಮ
ಮುಧೋಳ,ಫೆ.3- ನಗರದ ಶಿವಾಜಿ ಸರ್ಕಲ್, ಗಾಂಧಿ ಚೌಕದಿಂದ ಕಲ್ಮೇಶ್ವರ ಚೌಕದವರಗೆ ಜನದಟ್ಟನೆಯಿಂದ ಪಾದಾಚಾರಿಗಳಿ ತೀವ್ರ ತೋಂದ್ರೆ ನೀಗಿಸಲು ಪೊಲೀಸ್ರು ಕಟ್ಟುನಿಟ್ಟಿನ ಕ್ರಮ ಕೈ ಗೊಳ್ಳಲ್ಲಿದ್ದಾರೆ.ನಗರದಲ್ಲಿ ದ್ವಿಚಕ್ರ ವಾಹನ ಸವಾರರು ಮನಬಂದಲ್ಲಿ ವಾಹನ ನಿಲ್ಲಿಸಿ ವ್ಯಾಪರ ವೈವಾಟು ಮಾಡುವುದರಿಂದ ಸಾರ್ವಜನಕರಿಗೆ ತೀವ್ರ ತೊಂದರೆಯಾಗುತ್ತಿದ್ದುದನ್ನು ಗಮನಿಸಿ ಸಿಪಿಐ ಸಂಜೀವ ಕಾಂಬಳೆ ಹಾಗೂ ಪಿಎಸ್ಐ ಸಂತೋಷ ಹಳ್ಳೂರ ಈ ವ್ಯವಸ್ಥೆ ನಿಯಂತ್ರಣಕ್ಕಾಗಿ ಒಂದು ದಿನ ಎಡ ಮತೋಂದು ದಿನ ಬಲ ಭಾಗದಲ್ಲಿ ನಿಲ್ಲಿಸಲು ಓರ್ವ ಗಣಾಚಾರಿ ಪೊಲೀಸ್ ಪೇದೆ ನೆಮಕ ಮಾಡಿದ್ದಾರೆ. ಕಳೆದ ಒಂದು ವಾರದಿಂದ ಈ ಸಂಚಾರದ ಬಗ್ಗೆ ತಿಳಿಹೇಳಿ ಅದೇ ತಪ್ಪು ಮರಳಿ ಮಾಡಿದ್ದರೆ.
ಆ ಪೇದೆ ದಂಡದ ಪಾವತಿ ಹರಿದು ಕೋರ್ಟ್ಗೆ ಕಳಿಸುತ್ತಾರೆ ಸವಾರರು ಎಚ್ಚರದಿಂದ ವಾಹನಗಳನ್ನು ನೀಲ್ಲಿಸಬೇಕಾಗಿದೆ ಇದರಿಂದ ಜನದಟ್ಟನೆ ಕಿರಿಕಿರಿ ತಪ್ಪುತ್ತದೆ.ನಗರದ ಜನರು ಪೊಲೀಸ್ರ ಕರ್ತವ್ಯಕ್ಕೆ ಸಂಘ ಸಂಸ್ಥೆ, ರಾಜಕೀಯ ನಾಯಕರು, ಮತ್ತು ಸಾರ್ವಜನಕರು ಇಲಾಖೆ ಜೊತೆ ಸಹಕರಿಸ ಬೇಕಾಗಿದೆ ಎಂದು ಸಿಪಿಐ ಸಂಜೀವ ಕಾಂಬಳೆ ಅವರು ತಿಳಿಸಿದರು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS