ಜನಪ್ರತಿನಿಧಿಗಳ ನಿರ್ಲಕ್ಷ್ಯ: ಕುಡಿಯುವ ನೀರಿಗಾಗಿ ಪರದಾಟ

beluru

ಬೇಲೂರು, ಮಾ.23- ತಾಲೂಕಿನ ಮಾದಿಹಳ್ಳಿ ಹೋಬಳಿಯ ಮಲ್ಲಾಪುರ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಮಹಿಳೆಯರು ಕೊಡಗಳನ್ನಿಡಿದು ಪರದಾಡುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಇತ್ತ ಗಮನಹರಿಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ಕಳೆದ ಮೂರು ವರ್ಷಗಳಿಂದ ಸರಿಯಾಗಿ ಮಳೆಯಾಗದ ಕಾರಣ ಕೆರೆ ಕಟ್ಟೆಗಳೆಲ್ಲ ಬರಿದಾಗಿ ಜನರು ಹಾಗೂ ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೆ ತಾಲೂಕಿನಲ್ಲಿ ಹಾಹಾಕಾರ ಉಂಟಾಗಿದೆ. ಆದರೆ ತಾಲೂಕಿನ ಹಳೇಬೀಡು ಹಾಗೂ ಮಾದಿಹಳ್ಳಿ ಹೋಬಳಿಗಳಲ್ಲಂತೂ ನೀರಿಗಾಗಿ ಜನರ ಬವಣೆ ಹೇಳ ತೀರದಾಗಿದೆ.

ಕೆಲವೊಂದು ಗ್ರಾಮಗಳಿಗೆ ಗ್ರಾಮ ಪಂಚಾಯಿತಿ ಹಾಗೂ ಖಾಸಗಿ ವ್ಯಕ್ತಿಗಳು ಟ್ಯಾಂಕರ್ ಮೂಲಕ ನೀರನ್ನು ಪೂರೈಸುತ್ತಿದ್ದರೂ ಸಾಕಾಗುತ್ತಿಲ್ಲ. ಇನ್ನು ನಲ್ಲಿಗಳಲ್ಲಿ ಬರುವ ನೀರಿಗೆ ಗ್ರಾಮದ ಜನರೆಲ್ಲ ಕೊಡಗಳನ್ನಿಡಿದು ದಿನ ಗಟ್ಟಲೆ ನಲ್ಲಿಯ ಮುಂದೆ ಕೂರುವಂತಹ ಪರಿಸ್ಥಿತಿ ಈ ಹೋಬಳಿಗಳಲ್ಲಿ ಸಾಮಾನ್ಯವಾಗಿದ್ದು, ನೀರು ಬಿಡುವ ದಿನದಂದು ಕೂಲಿ ಕೆಲಸವನ್ನು ಬಿಟ್ಟು ನೀರಿಗಾಗಿ ನಲ್ಲಿಯ ಬಳಿ ಕಾದು ಕೂರುವಂತಾಗಿದೆ. ಅಲ್ಲದೆ ಕೆಲವೊಮ್ಮೆ ವಿದ್ಯುತ್ ಕೈ ಕೊಟ್ಟರಂತೂ ಅವರ ಪಾಡು ಹೇಳ ತೀರದಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಜನರ ನೀರಿನ ಬವಣೆ ನೀಗಿಸಲು ಸೂಕ್ತ ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS   

Sri Raghav

Admin