ಜನಮನ ಸೂರೆಗೊಂಡ ಬ್ರಹ್ಮ ಶ್ರೀನಾರಯಣಗುರುಗಳ ಬೆಳ್ಳಿರಥದ ಮೆರವಣಿಗೆ

hiriyuru--7

ಹಿರಿಯೂರು, ಆ.20-ತಾಲೂಕು ಆರ್ಯ ಈಡಿಗ ಸಮಾಜದಿಂದ ಹಮ್ಮಿ ಕೊಂಡಿದ್ದ ಬ್ರಹ್ಮ ಶ್ರೀ ನಾರಯಣ ಗುರುಗಳ ಜಯಂತಿ ಆಚರಣೆ ಹಾಗೂ ಜಾನಪದ ಕಲಾ ಮೇಳವನ್ನೊಳಗೊಂಡ ಭವ್ಯ ಮೆರವಣಿಗೆ ಎಲ್ಲರ ಮನಸೂರೆಗೊಂಡಿತು.ಮೆರವಣಿಗೆಗೆ ಶಾಸಕ ಡಿ.ಸುಧಾಕರ್ ಚಾಲನೆ ನೀಡಿದರು. ನಾರಯಣಗುರುಗಳ ಭಾವಚಿತ್ರದ ಬೆಳ್ಳಿ ರಥದ ಮೆರವಣಿಗೆಯು ವಿವಿಧ ವಾದ್ಯ ಮೇಳಗಳು, ಕರಡಿ ಮೇಳ, ವೀರಗಾಸೆ ನೃತ್ಯ ಮುಂತಾದವುಗಳೊಂದಿಗೆ ಇಡೀ ನಗರದಲ್ಲಿ ಸಂಚರಿಸಿತು.
ಈ ವೇಳೆ ಶಾಸಕ ಡಿ.ಸುಧಾಕರ್ ಮಾತನಾಡಿ, ಈಡಿಗ ಜನಾಂಗವು ಅತ್ಯಂತ ಹಿಂದುಳಿದ ಜನಾಂಗವಾಗಿದ್ದು, ಸಮಾಜದ ಮುಖ್ಯ ವಾಹಿನಿಗೆ ಬರುವಂತಾಗಬೇಕೆಂದು ಹೇಳಿದರು. ಸಮುದಾಯದ ಅಭಿವೃದ್ಧ್ದಿಗೆ ಸರ್ಕಾರದಿಂದ ದೊರೆಯಬಹುದಾದ ಸೌಲಭ್ಯಗಳನ್ನು ಕೊಡಿಸುವುದಾಗಿ ಭರವಸೆ ನೀಡಿದರು. ತಾ.ಪಂ. ಅಧ್ಯಕ್ಷರಾದ ಎಸ್.ಚಂದ್ರಪ್ಪ, ನಗರಸಭೆ ಅಧ್ಯಕ್ಷ  ಈ.ಮಂಜುನಾಥ್, ಈಡಿಗ ತಾಲೂಕು ಸಂಘದ ಅಧ್ಯಕ್ಷರಾದ ಅಜಯ್ ಕುಮಾರ್, ಡಿ.ತಿಪ್ಪೇಸ್ವಾಮಿ, ವಿವಿಪುರ ಉಮೇಶ್, ವಿ.ತಿಪ್ಪೇಸ್ವಾಮಿ, ಹೆಚ್ ರವೀಂದ್ರನಾಥ್, ಶ್ರೀನಿವಾಸ್ ಪಿಟ್ಲಾಲಿ, ಕೃಷ್ಣಂರಾಜ್, ನಾಗಪ್ಪ, ಉಮೇಶ್ ವಿ.ಮಹಿಳಾ ಸಂಘದ ಅಧ್ಯಕ್ಷರಾದ ಮೀನಾಬಾಲರಾಜ್ ಮತ್ತಿತರರು ಭಾಗವಹಿಸಿದ್ದರು.

 

► Follow us on –  Facebook / Twitter  / Google+

Sri Raghav

Admin