ಜನ್ಮನೀಡಿದ ತಂದೆಗೇ 5 ವರ್ಷ ಶಿಕ್ಷೆ ವಿಧಿಸಿದ ಬಾಲಕ..!
ರೋಡ್ ಐಲ್ಯಾಂಡ್ (ಅಮೆರಿಕ), ಜೂ. 1 : ತಂದೆ ಮಾಡಿದ ತಪ್ಪಿನ ಶಿಕ್ಷೆಯನ್ನು ಐದು ವರ್ಷದ ಬಾಲಕ ನಿರ್ಧರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೋರನ ಸಮಯಪ್ರಜ್ಞೆಗೆ ಅಪಾರ ಪ್ರಶಂಸೆಗಳು ವ್ಯಕ್ತವಾಗಿವೆ. ರೋಡ್ ಐಲ್ಯಾಂಡ್ನ ಪ್ರೊವಿಡೆನ್ಸ್ ಮುನ್ಸಿಪಲ್ ಕೋರ್ಟ್ನ ನ್ಯಾಯಾಧೀಶರು ಐದು ವರ್ಷದ ಬಾಲಕ ಜಾಕೋಬ್ಗೆ ತೀರ್ಪು ನೀಡುವ ವಿಶೇಷ ಅವಕಾಶ ನೀಡಿದರು. ಜಾಕೋಬ್ ತಂದೆ ನಿಯಮ ಉಲ್ಲಂಘಿಸಿ ಕಾರು ನಿಲುಗಡೆ ಮಾಡಿದ ಬಗ್ಗೆ ವಿಚಾರಣೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಬಾಲಕನೂ ನ್ಯಾಯಾಲಯಕ್ಕೆ ಆಗಮಿಸಿದ್ದ. ಈ ಸಂದರ್ಭದಲ್ಲಿ ಜಾಕೋಬ್ನನ್ನು ನೋಡಿ ನ್ಯಾಯಾಧೀಶರು ಕೊಠಡಿಗೆ ಕರೆದೊಯ್ದು ತಂದೆಯ ತಪ್ಪಿಗೆ ಶಿಕ್ಷೆ ವಿಧಿಸುವಂತೆ ಕೇಳಿದರು.
ನಿನ್ನ ತಂದೆಗೆ 90 ಡಾಲರ್ ಅಥವಾ 30 ಡಾಲರ್ ದಂಡ ವಿಧಿಸಬೇಕೇ ಇಲ್ಲವೇ ಯಾವುದೇ ದಂಡ ವಿಧಿಸದೇ ಬಿಡುಗಡೆ ಮಾಡಬೇಕೇ? ಇವುಗಳಲ್ಲಿ ನಿನ್ನ ಆಯ್ಕೆ ಯಾವುದು ಎಂದು ನ್ಯಾಯಾಧೀಶರು ಪ್ರಶ್ನಿಸಿದರು. ತನ್ನ ತಂದೆಗೆ ಯಾವುದೇ ದಂಡ ವಿಧಿಸದೇ ವಿಮೋಚನೆಗೊಳಿಸಬೇಕು ಎಂದು ಬಾಲಕ ನಿರ್ಧರಿಸುತ್ತಾನೆ ಎಂದು ಎಲ್ಲರೂ ಊಹಿಸಿದ್ದರು. ಆದರೆ ಜಾಕೋಬ್ ತನ್ನ ತಂದೆ ಮಾಡಿದ ತಪ್ಪಿಗಾಗಿ 30 ಡಾಲರ್ ದಂಡ ವಿಧಿಸಿ ಎಂದು ತೀರ್ಪು ನೀಡಿದ. ಬಾಲಕನ ನಿರ್ಧಾರದಿಂದ ಚಕಿತಗೊಂಡ ಆತನ ನಿಸ್ವಾರ್ಥ ಧೋರಣೆ ಮತ್ತು ಬುದ್ದಿಮತ್ತೆಗೆ ಕೋರ್ಟ್ ತಲೆದೂಗಿತು.
< Eesanje News 24/7 ನ್ಯೂಸ್ ಆ್ಯಪ್ >