ಜಪಾನಿ ರೈತನ ಹತ್ಯೆ ಮಾಡಿದ್ದ ಐವರು ಉಗ್ರರಿಗೆ ಗಲ್ಲು ಶಿಕ್ಷೆ

Japan-a0-1

ಢಾಕಾ, ಫೆ.28- ಕಳೆದ 2015ರಲ್ಲಿ ಜಪಾನಿನ ರೈತನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಎಂಬಿ ನಿಷೇಧಿತ ಉಗ್ರ ಸಂಘಟನೆಯ ಐದು ಮಂದಿ ಉಗ್ರರನ್ನು ಇಂದು ಗಲ್ಲಿಗೇರಿಸಲಾಯಿತು. ವಿದೇಶಿಯರು ಅದರಲ್ಲೂ ವಿಶೇಷವಾಗಿ ಹಿಂದೂಗಳ ವಿರುದ್ಧ ದೇಶದಲ್ಲಿ ಕಳೆದ ಕೆಲವು ವರ್ಷಗಳಿಂದ ಜನಾಂಗೀಯ ದಾಳಿಗಳು ಹೆಚ್ಚುತ್ತಿದ್ದು, ಈ ಪ್ರಕರಣವು ಕೂಡ ಇಂಥದ್ದೇ ಆಗಿತ್ತು.  ಆರೋಪದ ವಾದ-ಪ್ರತಿವಾದಗಳನ್ನು ಆಲಿಸಿದ ಇಲ್ಲಿನ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ನರೇಶ್ ಚಂದ್ರ ಸರ್ಕಾರ್ ಅವರು ತೀರ್ಪು ನೀಡಿ ಐವರು ಉಗ್ರರನ್ನು ಗಲ್ಲಿಗೆ ಹಾಕಬೇಕೆಂದು ಹೇಳಿದ್ದರು. ಈ ಆದೇಶದ ಹಿನ್ನೆಲೆಯಲ್ಲಿ ಐವರನ್ನು ಗಲ್ಲಿಗೇರಿಸಲಾಯಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin